ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ಮಧುಕರ ಸಭಾಂಗಣದಲ್ಲಿ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಶಾರೀರಿಕ ಶಿಕ್ಷಣ ಶಿಕ್ಷಕರ ಬೈಠಕ್ ನಡೆಯಿತು.

ಕಾರ್ಯಕ್ರಮದಲ್ಲಿ 20323-24ನೇ ಸಾಲಿನಲ್ಲಿ ನಡೆದ ಕ್ರೀಡಾ ಚಟುವಟಿಕೆಗಳ ಕುರಿತು ಪ್ರತಿ ಶಾಲೆಯಿಂದ ವರದಿ ನೀಡಿದರು.ಮತ್ತು 2024-25 ನೇ ಸಾಲಿನಲ್ಲಿ ನಡೆಯುವ ಕ್ರೀಡಾ ಚಟುವಟಿಕೆಗಳ ಯೋಜನೆ ರೂಪಿಸಲಾಯಿತು.

ವಿದ್ಯಾಭಾರತಿ ಪ್ರಾಂತಕಾರ್ಯದರ್ಶಿ ಹಾಗೂ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರು ವಸಂತ ಮಾಧವ ಮಾರ್ಗದರ್ಶನ ಮಾಡಿದರು.

ಸರಸ್ವತಿ ವಿದ್ಯಾಲಯ ಕಡಬ ಇದರ ಸಂಚಾಲಕರು ಹಾಗೂ ವಿದ್ಯಾಭಾರತಿ ಕ್ಷೇತ್ರಿಯ ನೈತಿಕ ಆಧ್ಯಾತ್ಮಿಕ ಶಿಕ್ಷಣ ಪ್ರಮುಖರು ವೆಂಕಟರಮಣ ಮಂಕುಡೆ, ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ವಿದ್ಯಾಭಾರತಿ ಜಿಲ್ಲಾಧ್ಯಕ್ಷರುಲೋಕಯ್ಯ ಡಿ, ಜಿಲ್ಲಾ ಕಾರ್ಯದರ್ಶಿ ರಮೇಶ್ ಕೆ. ಉಪಸ್ಥಿತರಿದ್ದರು.

ಖೇಲ್‌ಖೂದ್‌ ಜಿಲ್ಲಾ ಪ್ರಮುಖರಾದ ಕರುಣಾಕರ ಕಾರ್ಯಕ್ರಮವನ್ನು ನಿರ್ವಹಿಸಿದರು.