ಬಂಟ್ವಾಳ ಸ್ಪರ್ಶ ಕಲಾ ಮಂದಿರದಲ್ಲಿ ಆಗಸ್ಟ್ 3 ಮತ್ತು 4 ರಂದು ನಡೆಯುವ ಬಂಟ್ವಾಳ ಬೃಹತ್ ಹಲಸು ಹಬ್ಬ-ಹಣ್ಣುಗಳ ವಿವಿಧ ಆಹಾರೋತ್ಪನ್ನಗಳ ಮಹಾಮೇಳ ಹಾಗೂ ಪ್ರದರ್ಶನ ಮತ್ತು ಮಾರಾಟದ ಪ್ರಚಾರ ಪತ್ರವನ್ನು ರಾಜ್ಯ ಸಭಾ ಸದಸ್ಯರಾದ ರಾಜರ್ಷಿ ಡಿ.ವಿರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಸೀನಿಯರ್ ಚೇಂಬರ್ ಇಂಟರ್ನೇಶನಲ್ ಸಂಸ್ಥೆಯ ಬಂಟ್ವಾಳ ನೇತ್ರಾವತಿ ಸಂಗಮದ ಅಧ್ಯಕ್ಷ ಆದಿರಾಜ ಜೈನ್ ಮೇಳದ ಬಗ್ಗೆ ಪ್ರಸ್ತಾವನೆಗೈದರು. ಪದ್ಮಶೇಖರ ಜೈನ್, ಭರತ್ ಕುಮಾರ್ ಬಲ್ಲೋಡಿಗುತ್ತು, ಮಾಯಿಲಪ್ಪ ಸಾಲಿಯಾನ್, ಶ್ರೇಯಾಂಶ ಕುಮಾರ್, ಮಾಣಿಕ್ಯ ರಾಜ್ ಜೈನ್, ಶಾಂತಿ ಪ್ರಸಾದ್ ಜೈನ್, ಸತೀಶ ಕುಮಾರ್ ಪಿಲಿಂಗಾಲು ಉಪಸ್ಥಿತರಿದ್ದರು.