+++++ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಅಳಿಕೆ ವಲಯದ ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಅಳಿಕೆ ಹಿಂದೂ ರುದ್ರ ಭೂಮಿಯ ಸುತ್ತ ಮುತ್ತ ಬೆಳೆದಂತ ಕುರುಚಲು ಗಿಡಗಂಟಿಯ ಸ್ವಚ್ಛತೆ ಮತ್ತು ಅಪಾಯಕಾರಿ ಮರಗಳ ತೆರವು ಮಾಡಲಾಯಿತು.
ಈ ಶ್ರಮದಾನ ಕಾರ್ಯಕ್ರಮದಲ್ಲಿ ಅಳಿಕೆ ವಲಯ ಮೇಲ್ವಿಚಾರಕಿ ಮಾಲತಿ, ಶೌರ್ಯ ಘಟಕ ಸಂಯೋಜಕಿ ರೂಪಾ, ಘಟಕ ಪ್ರತಿನಿಧಿ ದೀಪಕ್, ಅಳಿಕೆ ಹಿಂದೂ ರುದ್ರ ಭೂಮಿಯ ನಿರ್ಮಾಣ ಸಮಿತಿಯ ಅದ್ಯಕ್ಷ ರಾಜೇಂದ್ರ ರೈ ಅಳಿಕೆ ಪಂಚಾಯತ್ ಅದ್ಯಕ್ಷರು ಪದ್ಮನಾಭ, ಪಂಚಾಯತ್ ಅಭಿವೃದ್ಧಿಯ ಅಧಿಕಾರಿ ಧನಂಜಯ ಧರ್ಮಸ್ಥಳ ಗ್ರಾಮಾಭಿವೃದ್ಧಿಯ ನಿಕಟ ಪೂವ೯ ಅಧ್ಯಕ್ಷ ಬಾಲಕೃಷ್ಣ ಪೂಜಾರಿ. ಘಟಕದ ಸದಸ್ಯರುಗಳಾದ ಪುಟ್ಟಣ್ಣ,ರಾಜೇಂದ್ರ, ವಿನೋದ್,ಸರಸ್ವತಿ,ಅಮಿತ, ಪ್ರೇಮ,ಚಂದ್ರಶೇಖರ,ಗಣೇಶ್, ಈಶ್ವರ ಗೌಡ, ಕುಶಾಲಪ್ಪ,ರವೀಶ್, ಸುರೇಶ್ ಮೊದಲಾದವರು ಭಾಗವಹಿಸಿದ್ದರು.