ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಸಂಕಲ್ಪ ಸಾಕಾರಕ್ಕಾಗಿ ಶ್ರಮಿಸಿದ ಕಾರ್ಯಕರ್ತರ ಶ್ರಮದ ಪ್ರತಿಫಲ ಚುನಾವಣೆಯಲ್ಲಿ ಶೇಕಡವಾರು ದಾಖಲೆಯ ಮತಗಳನ್ನು ಪಡೆದು ಮತ್ತೆ ಕರ್ನಾಟಕ ಬಿಜೆಪಿಯ ಹೆಬ್ಬಾಗಿಲು ಎಂಬುದನ್ನು ನಮ್ಮ ಕಾರ್ಯಕರ್ತರು ಮತ್ತು ಮತದಾರರು ನಿರೂಪಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜೇಂದ್ರ ಹೇಳಿದರು.
ಅವರು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರದ ಭ್ರಷ್ಟ, ದುರಾಡಳಿತವನ್ನು ಬೂತ್ ಮಟ್ಟದಲ್ಲಿ ಮನೆ ಮನೆಗೆ ತಲುಪಿಸಿ, ಸದ್ಯದಲ್ಲೇ ಎರುರಾಗಲಿರುವ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಗಲಿರುಳೆನ್ನದೆ ಶ್ರಮಿಸಬೇಕೆಂಬ ಕರೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾದ ಶ್ರೀ @BSYBJP ಅವರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ @AgrawalRMD, ವಿರೋಧ ಪಕ್ಷ ನಾಯಕರಾದ ಶ್ರೀ @RAshokaBJP, ಕೇಂದ್ರ ಸಚಿವರಾದ ಶ್ರೀ @JoshiPralhad , ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಶ್ರೀ @BSBommai, ಶ್ರೀ @JagadishShettar, ಶ್ರೀ @DVSadanandGowda, ಕೇಂದ್ರ ಸಚಿವರಾದ ಕು @ShobhaBJP, ಶ್ರೀ @VSOMANNA_BJP, ಮಾಜಿ ಸಂಸದರಾದ ಶ್ರೀ @nalinkateel , ಕೇಂದ್ರ ಸಚಿವರಾದ @ShobhaBJP, ಶ್ರೀ @VSOMANNA_BJP, ಮಾಜಿ ಉಪಮುಖ್ಯಮಂತ್ರಿಗಳಾದ ಶ್ರೀ @GovindKarjol, ಶ್ರೀ @drashwathcn, ಮಾಜಿ ಸಚಿವರಾದ ಶ್ರೀ @sriramulubjp, ಶ್ರೀ @CTRavi_BJP, ಕೋರ್ ಕಮಿಟಿ ಸದಸ್ಯರಾದ ಶ್ರೀ @BlrNirmal ಅವರು ಸೇರಿದಂತೆ ಸಂಸದರು, ಶಾಸಕರು, ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.