ಮೂಡುಬಿದಿರೆ: ಹೆಣ್ಣು ಮಕ್ಕಳು, ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಆರೋಗ್ಯ ಇಲಾಖೆಯ ವಿದ್ಯಾ ಸಿ.ಹೆಚ್. ಹೇಳಿದರು.
ಅವರು ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಧಾ ಅಧ್ಯಕ್ಷತೆಯಲ್ಲಿ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಬಾಣಂತಿ ಮತ್ತು ಶಿಶುವಿನ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದರು.
ಪುತ್ತಿಗೆ ವಲಯದ ಅಂಗನವಾಡಿ ಮೇಲ್ವೀಚಾರಕಿ ಕಾತ್ಯಾಯಿನಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಹೆಣ್ಣು ಮಕ್ಕಳು ಆರೋಗ್ಯವಂತರಾಗಿರಲು ಫಾಸ್ಟ್ ಫುಡ್ ಗಳನ್ನು ತ್ಯಜಿಸಿ ಆರೋಗ್ಯಕ್ಕೆ ಬೇಕಾಗಿರುವ ಉತ್ತಮ ಆಹಾರಗಳನ್ನು ಸೇವಿಸಬೇಕು. ಹೆತ್ತವರು ಕೂಡಾ ತಮ್ಮ ಮಕ್ಕಳಿಗೆ ಉತ್ತಮ ಆಹಾರವನ್ನು ನೀಡಬೇಕು ಎಂದರು.
ಇದೇ ಸಂದರ್ಭ ಶೇ 25 ರ ಅನುದಾನದಲ್ಲಿ ಮನೆ ದುರಸ್ತಿಗೆ 5 ಮಂದಿಗೆ ರೂ. 74894, ಕಂಪ್ಯೂಟರ್ ಶಿಕ್ಷಣಕ್ಕೆ ಇಬ್ಬರಿಗೆ 10000, ಔಷಧೋಪಚಾರಕ್ಕೆ ಇಬ್ಬರಿಗೆ 10,000, ಮದುವೆಗೆ ನಾಲ್ವರಿಗೆ 20,000, ಶಿಕ್ಷಣಕ್ಕೆ15 ಮಂದಿಗೆ 67000, ನಾಲ್ವರು ಅಂಗವಿಕಲರಿಗೆ 20,000 ವೈಯಕ್ತಿಕ ಸಹಾಯ ಧನ ವಿತರಿಸಲಾಯಿತು.
ಪಂಚಾಯತ್ ಸದಸ್ಯರು, ಪಿಡಿಒ ಭೀಮ ನಾಯಕ್, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.