ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆಯ 91ನೇ ಶೌರ್ಯ ವಿಪತ್ತು ನಿರ್ವಹಣಾ ಬಂಟ್ವಾಳ ತಾಲೂಕು ಸಮಿತಿಯ ಮಾಸ್ಟರ್ ಆಗಿ ವಗ್ಗ ವಾಮದಪದವು ವಲಯದ ಪ್ರಕಾಶ್ ಎಸ್. ಪೂಜಾರಿ ಹಾಗೂ ಬಂಟ್ವಾಳ ತಾಲೂಕು ಸಮಿತಿಯ ಕ್ಯಾಪ್ಟನ್ ಆಗಿ ಬಿ. ಸಿ. ರೋಡ್ ವಲಯದ ನಿತಿನ್ ಕುಮಾರ್ ಕುಲಾಲ್ ಆಯ್ಕೆಯಾದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌದದಲ್ಲಿ ಜರಗಿದ ಶ್ರೀಕ್ಷೇತ್ರ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದ 91ನೇ ಬಂಟ್ವಾಳ ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ಉದ್ಘಾಟನ ಕಾರ್ಯಕ್ರಮದ ನಂತರ ಜನಜಾಗೃತಿ ಪ್ರಾದೇಶಿಕ ವಿಭಾಗ ಬೆಳ್ತಂಗಡಿ ಇದರ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿನ್ಸೆ೦ಟ್ ಪಾಯ್ಸ್ ಶೌರ್ಯ ತಂಡಗಳ ನೀತಿ ನಿಯಮ ಕರ್ತವ್ಯಗಳ ಜವಾಬ್ದಾರಿ ಗಳ ಬಗ್ಗೆ ಮಾಹಿತಿ ನೀಡಿ, ತಾಲೂಕಿನ ಎಲ್ಲಾ ವಲಯದ ಶೌರ್ಯ ಘಟಕಗಳಿಗೆ ನಿರ್ಣಯ ಪುಸ್ತಕ ಹಸ್ತಾಂತರಿಸಿ, ತಾಲೂಕಿನ ನೂತನ ಮಾಸ್ಟರ್ ಹಾಗೂ ಕ್ಯಾಪ್ಟನ್ ರನ್ನು ಆಯ್ಕೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ದಕ್ಷಿಣ ಕನ್ನಡ ಜಿಲ್ಲಾ 1ರ ನಿರ್ದೇಶಕ ಮಹಾಬಲ ಕುಲಾಲ್, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಯೋಜನಾಧಿಕಾರಿ ಜಯವಂತ ಪಟಗಾರ, ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕುಯೋಜನಾಧಿಕಾರಿ ಬಾಲಕೃಷ್ಣ, ಜನಜಾಗೃತಿ ವೇದಿಕೆ ಉಡುಪಿ ಪ್ರಾದೇಶಿಕ ಕಚೇರಿ ಯೋಜನಾಧಿಕಾರಿ ಗಣೇಶ್ ಪಿ. ಆಚಾರ್ಯ, ವಿಪತ್ತು ನಿರ್ವಹಣೆ ಕಾರ್ಯಕ್ರಮದಯೋಜನಾಧಿಕಾರಿ ಕಿಶೋರ್ ಕುಮಾರ್ ಎಂ. ಜನಜಾಗೃತಿ ಮೇಲ್ವಿಚಾರಕ ನಿತೇಶ್, ಎಲ್ಲಾ ವಲಯಗಳ ಮೇಲ್ವಿಚಾರಕರು, ಎಲ್ಲಾ ಘಟಕಗಳ ಸಂಯೋಜಕರು, ಎಲ್ಲಾ ಘಟಕಗಳ ಅಧ್ಯಕ್ಷರುಗಳು, ಸದಸ್ಯರುಗಳು ಉಪಸ್ಥಿತರಿದ್ದರು.