ಕಲ್ಲಡ್ಕ ಶ್ರೀರಾಮ ಪ್ರೌಢ ಶಾಲೆಯ ಮಧುಕರ ಸಭಾಂಗಣದಲ್ಲಿ “ಹಿಂದೂ ಸಾಮ್ರಾಜ್ಯ ದಿನೋತ್ಸವ”ವನ್ನು ಶಿವಾಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಶ್ರೀರಾಮ ಪ್ರೌಢ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರು, ಹಿಂದುಜಾಗರಣ ವೇದಿಕೆಯ ಪ್ರಮುಖರಾದ ರಾಧಾಕೃಷ್ಣ ಅಡ್ಯಂತಾಯ ಅವರು ಮಾತನಾಡಿ “ತಾಯಿಯ ವಾತ್ಸಲ್ಯದ ಸಂಸ್ಕಾರದಿಂದ ಹಾಗೂ ಗುರುವಿನ ಶ್ರೇಷ್ಠ ಶಿಕ್ಷಣದಿಂದ ಹಿಂದೂ ಸಾಮ್ರಾಜ್ಯದ ನಿರ್ಮಾಣದ ಹಾಗೂ ಕೆಟ್ಟ ಆಚರಣೆಗಳನ್ನು ತೊಳೆದು ಹಾಕುವ ದೃಢಸಂಕಲ್ಪ ಹೊಂದಿದವನು ಶಿವಾಜಿ ಎಂದು ಹೇಳಿದರು.
ಈತ ಚಾಣಕ್ಯತನದಿಂದ ಶೌರ್ಯ, ಛಲ, ಸ್ವಾಭಿಮಾನ, ವಾತ್ಸಲ್ಯದಿಂದ ಹೋರಾಡಿ ಹಿಂದು ಸಾಮ್ರಾಜ್ಯದ ನಿರ್ಮಾಣಕ್ಕೆ ಶ್ರಮಿಸಿದನು ಎಂದರು. ಹೀಗೆ ಶಿವಾಜಿಯ ಜೀವನ ಚರಿತ್ರೆಯನ್ನುವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನುರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಕಾರ್ಯಕರ್ತರು, ಪ್ರಸ್ತುತ ಮಂಗಳೂರು ಗ್ರಾಮಾಂತರ ಜಿಲ್ಲಾ ಉದ್ಯೋಗಿ ಪ್ರಮುಖರು ಆಗಿರುವ ಮಹಾಬಲ ಕಲ್ಲಡ್ಕ ಅವರ ಅಧ್ಯಕ್ಷೀಯ ನುಡಿಗಳಲ್ಲಿ “ವಿದ್ಯಾರ್ಥಿ ತಮ್ಮ ಜೀವನದಲ್ಲಿ ಪ್ರಾಮಾಣಿಕ ಸಮಯ ಪಾಲನೆಯನ್ನು ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಗೋಪಾಲ್‌ಎಂ.ಉಪಸ್ಥಿತರಿದ್ದರು. ನಿನಾದ್‌ಅಮೃತವಚನ ನುಡಿದನು. ೮ನೇ ತರಗತಿಯ ವಿದ್ಯಾರ್ಥಿಗಳು ದೇಶಭಕ್ತಿಗೀತೆಯನ್ನು ಹಾಡಿದರು.
ಕಾರ್ಯಕ್ರಮವನ್ನು ಧನ್ಯಶ್ರೀ ನಿರೂಪಿಸಿ, ಹರ್ಷಕುಮಾರಿ ಸ್ವಾಗತಿಸಿ, ಯಜ್ಞಶ್ರೀ ವಂದಿಸಿದಳು. ಕಾರ್ಯಕ್ರಮದ ಅಂಗವಾಗಿ ಘೋಷಣೆಯನ್ನು ಹೇಳಲಾಯಿತು ಮತ್ತು ಶಾಂತಿಮಂತ್ರದೊಂದಿಗೆ ಕೊನೆಗೊಳಿಸಲಾಯಿತು.