ಶಿಕಾರಿಪುರ ಲೋಕಸಭಾ ಚುನಾವಣೆ ಹಾಗೂ ವಿಧಾನ ಪರಿಷತ್ ಚುನಾವಣೆಗಳ ಗೆಲುವಿಗೆ ಶ್ರಮಿಸಿದ ಪಕ್ಷದ ಕಾರ್ಯಕರ್ತರು ಹಾಗೂ ಮತದಾರರುಗಳಿಗೆ ಅಭಿನಂದನಾ ಸಮಾರಂಭ ಆಯೋಜಿಸಲಾಯಿತು.

ಮತ್ತೊಮ್ಮೆ ಮೋದಿ ಜೀ ಅವರ ಸರ್ಕಾರ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಸಂಸದರಾದ ಶ್ರೀ B Y Raghavendra ಅವರ ದಾಖಲೆಯ ಹ್ಯಾಟ್ರಿಕ್ ಗೆಲುವು ಹಾಗೂ ವಿಧಾನ ಪರಿಷತ್ ಚುನಾವಣೆಯಲ್ಲಿ ನೈಋತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರಗಳ ನಮ್ಮ ಅಭ್ಯರ್ಥಿಗಳಾಗಿದ್ದ ಶ್ರೀ ಎಸ್.ಎಲ್.ಭೋಜೇಗೌಡ ಹಾಗೂ ಶ್ರೀ Dr. Dhananjaya Sarji ಜನಪರ – ಜೀವಪರ ಅವರುಗಳಿಗೆ ಮತ ನೀಡಿ ಗೆಲುವಿಗೆ ಶ್ರಮಿಸಿದ ಮತದಾರರು ಹಾಗೂ ಹಗಲಿರುಳೆನ್ನದೆ ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದರಾದ ಶ್ರೀ B Y Raghavendra ವಿಧಾನ ಪರಿಷತ್ ಸದಸ್ಯರಾದ ಶ್ರೀ @Dr_Sarji, ಜಿಲ್ಲಾಧ್ಯಕ್ಷರಾದ ಶ್ರೀ ಟಿ.ಡಿ ಮೇಘರಾಜ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಕಡಿದಾಳ್ ಗೋಪಾಲ್, ಮಂಡಲ ಅಧ್ಯಕ್ಷರಾದ ಶ್ರೀ ಹನುಮಂತಪ್ಪ, ಮುಖಂಡರಾದ ಶ್ರೀ ಹೆಚ್.ಟಿ.ಬಳಿಗಾರ್, ಶ್ರೀ ಸಿದ್ದಲಿಂಗಪ್ಪ, ಶ್ರೀ ರೇವಣಪ್ಪ, ಶ್ರೀ ಹಾಲಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷರಾದ ಶ್ರೀಮತಿ ಗಾಯತ್ರಿದೇವಿ, ಶ್ರೀ ಮಹೇಶ್ ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.