ಪಂಜಿಕಲ್ಲು ಗ್ರಾಮದ ಬುಡೋಲಿ ನೇತಾಜಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಪ್ರಯುಕ್ತ ಜೂ.9ರಂದು ಪರಿಸರ ಕಾರ್ಯಕ್ರಮ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದೊಂದಿಗೆ ನಡೆಯಿತು.

ಸಿದ್ಧಕಟ್ಟೆ ವಲಯ ಹಾಗೂ ಪುಂಚೋಡಿ ಒಕ್ಕೂಟದ ಅಧ್ಯಕ್ಷ ರಾಧಾಕೃಷ್ಣ ಪಟ್ರಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ದಿನೇಶ್‌ ಪೂಜಾರಿ ಐಸ್ರಗೋಳಿ, ವಲಯದ ಮೇಲ್ವಿಚಾರಕರಾದ ಬಾಬು, ಸೇವಾ ಪ್ರತಿನಿಧಿ ಮಹೇಶ್ವರಿ, ಪದಾಧಿಕಾರಿಗಳಾದ ಅಶೋಕ್‌, ಚಿತ್ರಾ, ಶಶಿಧರ ಪಟ್ರಾಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.