ವಿಶಿಷ್ಟ ಪೂರ್ಣವಾದ ನಮ್ಮ ಧರ್ಮ, ಸಂಸ್ಕಾರ, ಕ್ರಮಗಳನ್ನು ಹೇಳಿಕೊಡುವ ಶಾಲೆ ಕಲ್ಲಡ್ಕ ಶ್ರೀರಾಮ. ಇಲ್ಲಿ ಕೊಡುವ ಸಂಸ್ಕಾರವನ್ನು ಮನೆಯಲ್ಲಿಯು ಕಾರ್ಯರೂಪಕ್ಕೆ ತಂದು ಭವಿಷ್ಯದಲ್ಲಿ ಉತ್ತಮ ಸಮಾಜಕಟ್ಟುವಂತೆ ಆಗಲಿ” ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ್ ಭಟ್‌ ಕಲ್ಲಡ್ಕ ಮಕ್ಕಳಿಗೆ ಶುಭಹಾರೈಸಿದರು.

ಅವರು ಮೇ 29 ರಂದು ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ೨೦೨೪-೨೫ನೇ ಶೈಕ್ಷಣಿಕ ವರ್ಷದ ಶಾಲಾರಂಭಕ್ಕೆ ಪ್ರಯುಕ್ತ ಭಾರತ ಮಾತೆಗೆ ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡಿ ಮಾತನಾಡಿದರು.

ಶಾಲೆಗೆ ನೂತನವಾಗಿ ಸೇರ್ಪಡೆಯಾದ ಪುಟಾಣಿಗಳಿಗೆ ಹಾಗೂ ಎಲ್ಲ ವಿದ್ಯಾರ್ಥಿಗಳಿಗೆ ಅಧ್ಯಾಪಕ ವೃಂದದವರು ಆರತಿ ಬೆಳಗಿ, ಅಕ್ಷತೆ ಹಾಕಿ, ತಿಲಕವಿಟ್ಟು ಸಿಹಿ ನೀಡಿ ನೂತನ ಶೈಕ್ಷಣಿಕ ವರ್ಷಕ್ಕೆ ಬರಮಾಡಿಕೊಂಡರು.

“ಶ್ರೀರಾಮ ಮಂದಿರವೇ ಈ ವಿದ್ಯಾಸಂಸ್ಥೆಗೆ ಪ್ರೇರಣೆ. 73 ವಿದ್ಯಾರ್ಥಿಗಳಿಂದ ಆರಂಭಗೊಂಡಈ ವಿದ್ಯಾಸಂಸ್ಥೆ ಇಂದು 3500 ವಿದ್ಯಾರ್ಥಿಗಳನ್ನೊಳಗೊಂಡ ಬೃಹತ್‌ ಸಂಸ್ಥೆಯಾಗಿ ಬೆಳೆದಿದೆ.

ನಂತರ ಸಂಸ್ಥೆಯ ಹಿರಿಯರು ಮಕ್ಕಳಿಗೆ ಉಚಿತ ಪಠ್ಯಪುಸ್ತಕದೊಂದಿಗೆ, ಬರೆಯುವ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಿದರು.

ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸುಶ್ಮಿತಾ ಭಟ್‌ಸ್ವಾಗತಿಸಿ, ವಂದಿಸಿದರು. ಚಿನ್ಮಯಿ ಕಾರ್ಯಕ್ರಮ ನಿರೂಪಿಸಿದರು.