ವಿದ್ಯಾರ್ಥಿಗಳಲ್ಲಿ ಅನೇಕ ಪ್ರತಿಭೆಗಳು ಅಡಗಿರುತ್ತದೆ ಪಠ್ಯದ ಜೊತೆಗೆ ಇತರ ಸಾಮಾನ್ಯ ಜ್ಞಾನ ಮೈಗೂಡಿಸಿಕೊಂಡು ಗುರು ಹಿರಿಯರಿಗೆ ವಿಧೇಯರಾಗಿ ಉತ್ತಮ ವಿದ್ಯಾರ್ಥಿಗಳಾಗಿ ಎಂದು ಸ್ಥಾಪಕ ಅಧ್ಯಕ್ಷ ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾಸ್ವಾಮೀಜಿ ಆರ್ಶೀವಚನ ನೀಡಿದರು.
ಅವರು ಡಿ.25 ರಂದು ಮೂಡಬಿದ್ರೆಯ ಸ್ವಸ್ತಿಶ್ರೀ ಭಟ್ಟಾರಕ ಸಭಾಭವನದಲ್ಲಿ ಮೂಡುಬಿದಿರೆ ಜೈನ ಪೇಟೆ ಸ್ವಸ್ತಿಶ್ರೀ ಭಟ್ಟಾರಕ ನಗರದ ಸ್ವಸ್ತಿಶ್ರೀ ಜೈನ ವಸತಿ ಪ.ಪೂ.ಕಾಲೇಜಿನ ಹತ್ತನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವ ಉಧ್ಯಮಿ ನವ್ಯ ತೇಜಸ್ ಮೂಡಬಿದ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿದ್ಯಾರ್ಥಿ ಜೀವನವು ಅತಿ ಅಮೂಲ್ಯವಾದದು ಅದನ್ನ ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ರಾಷ್ಟ್ರೀಯ ಅಂಗಾಂಗ ದಾನದ ಅಧ್ಯಕ್ಷ ಲಾಲ್ ಗೋಯಲ್ ಮಾತನಾಡಿ ಮನುಷ್ಯನ ಜೀವನದಲ್ಲಿ ಇನ್ನೊಬ್ಬರಿಗೆ ಸಹಾಯವನ್ನು ಮಾಡುವುದು ಅತಿ ಮುಖ್ಯ. ಪ್ರತಿಯೊಬ್ಬ ಮನುಷ್ಯನು ಅಂಗಾಂಗ ದಾನದ ಮಹತ್ವವನ್ನು ಅರಿತುಕೊಂಡಿರಬೇಕು ಆಗ ವಿದ್ಯಾರ್ಥಿ ಜೀವನದಲ್ಲಿ ಸಮಾಜದಜನರಿಗೆ ಹೇಗೆ ಸಹಾಯವನ್ನು ಮಾಡಲು ಸಾಧ್ಯ ಎಂದು ತಿಳಿಯುವುದು ಅಗತ್ಯ ಎಂದರು.
ಕಾಲೇಜಿನ ಸಂಚಾಲಕ ಎಂ. ಬಾಹುಬಲಿ ಪ್ರಸಾದ್ ಮಾತನಾಡಿ ಕಾಲೇಜು ಅಭಿವೃದ್ಧಿ ಹೊಂದಬೇಕಾದರೆ ಹಳೆ ವಿದ್ಯಾರ್ಥಿಗಳ ಪಾತ್ರ ಅತಿ ಅಮೂಲ್ಯವಾದದು. ಹಾಗೂ ಈ ಕಾಲೇಜು ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೋಸ್ಕರ ಪೂಜ್ಯ ಸ್ವಾಮೀಜಿಯವರು ಸ್ಥಾಪಿಸಿದಂತಹ ಸಂಸ್ಥೆ. ಇಲ್ಲಿ ಮಕ್ಕಳಿಗೆ ಉಚಿತ ಲೇಖನ ಸಾಮಗ್ರಿ ಊಟ ಎಲ್ಲವನ್ನು ನೀಡಲಾಗುತ್ತದೆ ಎಂದರು.
ಸಂಜಯಂತ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಜಾತ ಪ್ರಭಾ ಚಂದ್ರ ಮುಳಿಬೆಟ್ಟು ಹಾಗೂ ಪ್ರತಿಮಾ, ಬಾಹುಬಲಿ ಪ್ರಸಾದ್, ಬಿಂದು ಶರತ್ ಶೆಟ್ಟಿ ಅವರು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಿದರು. ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನ್ಯಾಯವಾದಿ ನೋಟರಿ ಶ್ವೇತಾ ಜೈನ್ ಅವರನ್ನು ಸಂಸ್ಥೆ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮವನ್ನು ಪ್ರಾಂಶುಪಾಲೆ ಸೌಮ್ಯ ಶ್ರೀ ಸ್ವಾಗತಿಸಿದರು. ಪವನಶ್ರೀ ವಂದಿಸಿ, ಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.