ಕಡೇಶಿವಾಲಯ ಗ್ರಾಮದ ಪತ್ತು ಕೊಡಂಗೆ ಶ್ರೀ ವಾಸು ಪೂಜಾರಿ ಅವರ ಧರ್ಮಪತ್ನಿ ಶ್ರೀಮತಿ ಪುಷ್ಪ (ಕುಸುಮ ) 76 ಮೇ 8ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಯೋಸಹಜ, ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು.
ಮೃತರು ಪತಿ, ಪುತ್ರರು, ಪುತ್ರಿಯರು, ಸೊಸೆಯಂದಿರು, ಅಳಿಯಂದಿರು ಮೊಮ್ಮಕ್ಕಳು, ಮರಿ ಮೊಮ್ಮಗ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ದೈವಾಧಿನರಾಗಿರುವ ಶ್ರೀಮತಿ ಪುಷ್ಪಾ ಕೂಡು ಕುಟುಂಬದ ಬಹು ದೊಡ್ಡ ಸಂಸಾರವನ್ನು ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಇತರರಿಗೆ ಮಾದರಿಯಾಗಿದ್ದರು. ತುಂಬಾ ಸೌಮ್ಯ ಸ್ವಭಾವದ ಇವರು ಅರುವಾರ ಕೊಡಂಗೆ ಗುತ್ತು ಕುಟುಂಬದ ಹಿರಿಯ ಸದಸ್ಯೆಯಾಗಿದ್ದು ಕುಟುಂಬದ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು.