ಪುತ್ತೂರು: ಮಂಗಳೂರು ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗಿದ್ದು ಡಬ್ಬಲ್ ಚೋಲ್, ಸಿಂಗಲ್ ಚೋಲ್ ಧಾರಣೆ 500 ರೂ. ಹತ್ತಿರಕ್ಕೆ ತಲುಪಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ
ಡಬ್ಬಲ್ ಚೋಲ್, ಸಿಂಗಲ್ ಚೋಲ್ ಅಡಿಕೆ ಧಾರಣೆ ಕೆ.ಜಿ.ಗೆ 500 ರೂ. ಗಡಿಗೆ ತಲುಪಿದೆ. ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ ಮೇ 15ರಂದು ಡಬ್ಬಲ್ ಚೋಲ್‌ಗೆ ಕೆ.ಜಿ.ಗೆ 490 ರೂ. ಇದ್ದರೆ, ಸಿಂಗಲ್ ಚೋಲ್‌ಗೆ 480 ರೂ. ಇತ್ತು. ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 400 ರೂ. ಗಡಿಗೆ ತಲುಪಿದೆ. ಮೇ 15ರಂದು ಹೊರ ಮಾರುಕಟ್ಟೆಯಲ್ಲಿ 390 ರೂ. ತನಕ ಖರೀದಿಯಾಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿನ ಧಾರಣೆ ಗಮನಿಸಿದರೆ ಹೊಸ ಅಡಿಕೆಗೆ ಮಾತ್ರ ಇಲ್ಲಿ ಬೇಡಿಕೆ ಇರುವುದು ಕಂಡು ಬಂದಿದೆ. ಕ್ಯಾಂಪ್ಕೋದಲ್ಲಿ ಮೇ 15ರಂದು ಹೊಸ ಅಡಿಕೆಗೆ 380 ರೂ., ಸಿಂಗಲ್ ಚೋಲ್‌ಗೆ 465 ರೂ., ಡಬ್ಬಲ್ ಚೋಲ್‌ಗೆ 475 ರೂ. ದಾಖಲಾಗಿದೆ.
ಕೆ.ಜಿ.ಗೆ 320 ರೂ. ವರೆಗೆ ಏರಿಕೆ ಕಂಡಿದ್ದ ಹಸಿ ಕೊಕ್ಕೋ ಧಾರಣೆ ಇದೀಗ 220 ರೂ.ಗೆ ಇಳಿದಿದೆ. ಬುಧವಾರ ಕ್ಯಾಂಪ್ಕೋ ಸಂಸ್ಥೆ 150-220 ವರೆಗೆ ಹಸಿ ಕೊಕ್ಕೋ ಖರೀದಿಸಿದೆ. ಒಣ ಕೊಕ್ಕೊ ಧಾರಣೆ 650- 700 ರೂ.ಗಳಷ್ಟಿತ್ತು.
ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಮೇ 14) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 54 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ.