ಮೇ ೧, ೨೦೨೪ ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ನಡೆದ ಸಮಾರಂಭದಲ್ಲಿ, ಗೌರವಾನ್ವಿತ ಡಾ. ವಿ ಪರಮೇಶ್ವರ ಸ್ಮಾರಕ ಸೃಜನಾತ್ಮಕ ಸಂಗೀತ ಚಿಕಿತ್ಸೆ ಪ್ರಶಸ್ತಿಯನ್ನು ಮಂಗಳೂರಿನ ಯೆನೆಪೊಯ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಿವಿ, ಮೂಗು, ಗಂಟಲು ಶಸ್ತ್ರಚಿಕಿತ್ಸೆವಿಭಾಗದ ಪ್ರಾಧ್ಯಾಪಕರಾದ ಡಾ. ವಿಜಯಲಕ್ಷ್ಮಿ ಸುಬ್ರಹ್ಮಣ್ಯಂ ಅವರಿಗೆ ಪ್ರದಾನ ಮಾಡಲಾಯಿತು. . ಪ್ರವೀಣ ಸಂಗೀತಗಾರತಿ ಮತ್ತು ಸರ‍್ಪಿತ ಸಂಗೀತ ಚಿಕಿತ್ಸಕಿ ಡಾ ವಿಜಯಲಕ್ಷ್ಮಿಅವರು ಸಂಗೀತ ಚಿಕಿತ್ಸಾ ಕ್ಷೇತ್ರಕ್ಕೆ ಅವರ ಅಸಾಧಾರಣ ಕೊಡುಗೆಗಳಿಗಾಗಿ ಗುರುತಿಸಲ್ಪಟ್ಟರು.

ಭಾರತೀಯ ವಿದ್ಯಾಭವನ ಮತ್ತು ಮೀರಾ ಸೆಂಟರ್ ಫಾರ್ ಮ್ಯೂಸಿಕ್ ಥೆರಪಿ ಎಜುಕೇಶನ್ ಅಂಡ್ ರಿಸರ್ಚ್ ಸಹಯೋಗದಲ್ಲಿ ಬೆಂಗಳೂರಿನ ಹೆಸರಾಂತ ಹೃದ್ರೋಗ ತಜ್ಞ, ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ದಿವಂಗತ ಡಾ. ವಿ ಪರಮೇಶ್ವರ ಅವರ ಪ್ರೀತಿಯ ನೆನಪಿಗಾಗಿ ೨೦೨೨ ರಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ‌

ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್.ಕುಮಾರ್, ಗಾನಕಲಾ ಭೂಷಣ ವಿದುಷಿ ಶ್ರೀಮತಿ ಆರ್.ಎ.ರಮಾಮಣಿ, ಭಾರತೀಯ ವಿದ್ಯಾಭವನದ ನಿರ್ದೇಶಕರಾದ ಶ್ರೀ ಎಚ್. ಎನ್. ಸುರೇಶ್, ಇಂಡೋ ಏಷ್ಯನ್ ಗ್ರೂಪ್ ಆಫ್ ಎಜುಕೇಶನಲ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಶ್ರೀ ಏಕಾಂಬರಂ ನಾಯ್ಡು ಉಪಸ್ಥಿತರಿದ್ದರು. ಡಾ. ನಳಿನಿ ಪರಮೇಶ್ವರ (ಡಾ. ವಿ. ಪರಮೇಶ್ವರ ಅವರ ಪತ್ನಿ), ನಾದಯೋಗಿನಿ ವಿದುಷಿ ಶ್ರೀಮತಿ ಡಾ. ಮೀನಾಕ್ಷಿ ರವಿ, ಮತ್ತು ರ‍್ನಾಟಕ ಕಲಾಶ್ರೀ ವಿದ್ವಾನ್ ಡಾ. ಎನ್‌ಜಿ ರವಿ.ಶ್ರೀ ಕೆ.ವಿ ಶಾಸ್ತ್ರಿ ಮತ್ತು ಮೀರಾ ಸೆಂಟರ್ ಫಾರ್ ಮ್ಯೂಸಿಕ್ ಥೆರಪಿ ಎಜುಕೇಶನ್ ಅಂಡ್ ರಿಸರ್ಚ್ ಟ್ರಸ್ಟಿಗಳಾದ ಶ್ರೀ ನಾಗರಾಜ್ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ವಿಜಯಲಕ್ಷ್ಮಿ ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ತಮ್ಮ ಪೋಷಕರು, ಮಾರ್ಗದರ್ಶಕರು ಮತ್ತು ಸಂಗೀತ ಚಿಕಿತ್ಸೆಯಲ್ಲಿ ತಮ್ಮ ನಂಬಿಕೆಯನ್ನು ಇಟ್ಟುಕೊಂಡಿರುವ ರೋಗಿಗಳ ಸಮುದಾಯಕ್ಕೆ ಸಮರ್ಪಿಸಿದರು. ರೋಗಿಗಳ ಅಚಲವಾದ ನಂಬಿಕೆ ಮತ್ತು ದೈರ್ಯ ಸಂಗೀತ ಚಿಕಿತ್ಸಾ ಕ್ಷೇತ್ರದಲ್ಲಿ ಅವರು ಉತ್ತಮವಾಗಿ ಕೆಲಸ ಮಾಡಲು ಸ್ಫೂರ್ತೀಯಾಗಿದೆ. ಸಂಗೀತ ಚಿಕಿತ್ಸೆಯ ಪರಿವರ್ತನಾ ಶಕ್ತಿಗೆ ಈ ಪ್ರಶಸ್ತಿ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.