ಕುಡಿಯುವ ನೀರಿನ ಸಮಸ್ಯೆ ಮತ್ತು ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಮೇ.3ರಂದು ಜಿಲ್ಲಾ ಮಟ್ಟದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆ ಯಲ್ಲಿ ಜರುಗಿದ ಸಭೆಯಲ್ಲಿ ನೀಡಿರುವ ನಿರ್ದೇಶನದಂತೆ ಮೇ. 4 ರಂದು ಎಸ್ ಜಿ ಎಸ್ ವೈ ಸಭಾಂಗಣ ತಾಲೂಕು ಪಂಚಾಯತ್ ಬಂಟ್ವಾಳ ದಲ್ಲಿ ಮಾನ್ಯ ತಹಸೀಲ್ದಾರ್ ರವರ ಅಧ್ಯಕ್ಷತೆ ಯಲ್ಲಿ ನಡೆದ ಸಭೆಯಲ್ಲಿ ಈ ಕೆಳಗಿನಂತೆ ಚರ್ಚಿಸಲಾಯಿತು.
1. ನಗರ ಮತ್ತು ಗ್ರಾಮ ಮಟ್ಟದಲ್ಲಿ ಪ್ರಾಕೃತಿಕ ವಿಕೋಪ ನಿರ್ವಹಣೆ ಬಗ್ಗೆ ಕ್ರಿಯಾ ಯೋಜನೆ ಸಿದ್ದಪಡಿಸುವುದು.
2. ಅಪಾಯಕಾರಿ ಪ್ರದೇಶಗಳು ಅಂದರೆ ಪ್ರವಾಹ ಭೂ ಕುಸಿತ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸುವುದು ಮತ್ತು ವಿಪರೀತ ಮಳೆಯ ಸಮಯ ಸದ್ರಿ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸುವುದು
3. ಗಣಿಗಾರಿಕೆಯಿಂದ ಉಂಟಾಗಿರುವ ಹೊಂಡ ಗಳಲ್ಲಿ ಮಳೆಗಾಲದಲ್ಲಿ ನೀರು ನಿಂತು ಜನ ಮತ್ತು ಜಾನುವಾರು ಗಳ ಜೀವ ಹಾನಿಯಾಗುವ ಸಂಭವ ಇರುವುದರಿಂದ ಸದ್ರಿ ಪ್ರದೇಶಗಳಲ್ಲಿ ಸುತ್ತಲೂ ಬೇಲಿ ಅಥವಾ ತಡೆ ನಿರ್ಮಿಸುವುದು. ಮತ್ತು ಆ ಕಡೆ ತೆರಳದಂತೆ ಎಚ್ಚರಿಕೆ ಫಲಕ ಹಾಕುವುದು.
4. ಶಾಲಾ ಕಾಲೇಜು ಅಂಗನವಾಡಿ ಕಟ್ಟಡಗಳನ್ನು ಪರಿಶೀಲಿಸಿ ಸುಸ್ಥಿತಿಯಲ್ಲಿ ಇರುವಂತೆ ಕ್ರಮವಹಿಸುವುದು.
5. ಗ್ರಾಮಪಂಚಾಯಿತಿ, ಜಿಲ್ಲಾಪಂಚಾಯತ್, PWD ರಸ್ತೆಗಳ ಇಕ್ಕೆಳಗಲ್ಲಿ ಇರುವ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಕಸ ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸುವುದು.