ಬಂಟ್ವಾಳ,. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪೊಳಲಿ ವಲಯದ ಧನುಪೂಜೆಯ ಶ್ರೀ ರಾಘವೇಂದ್ರ ಸ್ವಾಮಿ ಜ್ಞಾನ ದೇಗುಲ ಮಠ ಇದರ ಜೀರ್ಣೋದ್ಧಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಮಂಜೂರಾದ 1 ಲಕ್ಷ ಮೊತ್ತದ DD ಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಶ್ರೀ ಬಾಲಕೃಷ್ಣರವರು ಮಠದ ಸಮಿತಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಜ್ಞಾನ ದೇಗುಲ ಮಠದ ಶಂಕರ ಸ್ವಾಮೀಜಿ, ಮಠದ ಅಧ್ಯಕ್ಷರಾದ ಸಂದೇಶ್, ಜೀರ್ಣೋದ್ದಾರ ಸಮಿತಿಯ ಉಪಾಧ್ಯಕ್ಷರುಗಳಾದ ಕಮಲಾಕ್ಷ, ಸಂದೀಪ್, ಯೋಜಯೆಯ ಧನುಪೂಜೆ ಒಕ್ಕೂಟ ಅಧ್ಯಕ್ಷರಾದ ಗಂಗಯ ಪೂಜಾರಿ, ಉಪಾಧ್ಯಕ್ಷರಾದ ನಳಿನಿ, ಬಂಟ್ವಾಳ ಯೋಜನಾ ಕಚೇರಿಯ ಲೆಕ್ಕ ಪರಿಶೋಧಕ ರಾಜೇಶ್, ಪೊಳಲಿ ವಲಯ ಮೇಲ್ವಿಚಾರಕಿ ಹರಿಣಾಕ್ಷಿ, ಸೇವಾಪ್ರತಿನಿಧಿ ಅಮಿತಾ ಉಪಸ್ಥಿತರಿದ್ದರು.