ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಂಟ್ವಾಳ ಕಸ್ಬಾ ಶಕ್ತಿ ಕೇಂದ್ರದ ಬೂತ್ ಸಮಿತಿ ಸಭೆ ಪ್ರಮುಖರು ಹಿರಿಯರಾದ ಉದಯರಾವ್ ಅವರ ಮನೆಯಲ್ಲಿ ಮಂಡಲದ ಅಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಘಟನಾತ್ಮ ವಿಚಾರಗಳ ಬಗ್ಗೆ ಬೂತ್ ಕಾರ್ಯಗಳ ಬಗ್ಗೆ ಆರ್. ಚೆನ್ನಪ್ಪ ಕೋಟ್ಯಾನ್ ತಿಳಿಸಿದರು.
ನಗರ ಮಹಾಶಕ್ತಿ ಕೇಂದ್ರದ ಪ್ರಭಾರಿ, ಜಿಲ್ಲಾ ಕಾರ್ಯದರ್ಶಿಗಳಾದ ದಿನೇಶ್ ಆಮ್ಟೂರ್, ನಗರ ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಗಣೇಶ್ ದಾಸ್, ಪುರಸಭೆಯ ಸದಸ್ಯರುಗಳು, ಬೂತ್ ಸಮಿತಿಯ ಅಧ್ಯಕ್ಷರು ಪದಾಧಿಕಾರಿಗಳು ಸರ್ವ ಸದಸ್ಯರು ಹಾಗೂ ಪಾರ್ಟಿಯ ಪ್ರಮುಖರು, ಕಾರ್ಯಕರ್ತ ಬಂಧುಗಳು ಉಪಸ್ಥಿತರಿದ್ದರು.