ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ “ದೀಪ ಪ್ರದಾನ ” ಕಾರ್ಯಕ್ರಮ ನಡೆಯಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ I ಪ್ರಭಾಕರ್ ಭಟ್ ಕಲ್ಲಡ್ಕ ಮಾತನಾಡುತ್ತಾ, “ಭಾರತ ಶಿಕ್ಷಣದಲ್ಲಿ ಮುಂದುವರೆದ ದೇಶ. ಅನೇಕ ದೇಶದ ಜನರು ಜ್ಞಾನ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ. ಅಂತಹ ಒಳ್ಳೆಯ ಶಿಕ್ಷಣ ನೀಡುವ ಕೇಂದ್ರ ಭಾರತ.
ಒಬ್ಬ ಮನುಷ್ಯ ಎತ್ತರಕ್ಕೆ ಬೆಳೆಯಬೇಕಾದರೆ, ಪ್ರಸಿದ್ಧಿ ಪಡೆಯಬೇಕಾದರೆ ಶಿಕ್ಷಣ ಅತ್ಯಗತ್ಯ. ಗುರುಕುಲದಲ್ಲಿ ರಚನಾತ್ಮಕವಾಗಿ ಶಿಕ್ಷಣವನ್ನು ನೀಡುತ್ತಿದ್ದರು. ಗುರುಕುಲ ಪದ್ಧತಿಯಲ್ಲಿ ನಡೆಯುತ್ತಿದ್ದ ಶಿಕ್ಷಣವು ಇಂದಿನ ಪ್ರಸ್ತುತ ಸನ್ನಿವೇಶಕ್ಕೆ ಅತ್ಯಗತ್ಯವಾಗಿದೆ.
ಶ್ರೀರಾಮ ವಿದ್ಯಾಸಂಸ್ಥೆಯು 44 ವರ್ಷಗಳಿಂದ ಗುರುಕುಲ ಪದ್ಧತಿಯಲ್ಲಿ ಶಿಕ್ಷಣವನ್ನು ಪೂರೈಸುತ್ತಿದ್ದು, ಪಂಚಮುಖಿ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಪ್ರತಿಯೊಬ್ಬರೂ ಮೊದಲು ಗುಣಗಳನ್ನು ಕಲಿಯಬೇಕು. ಆತ್ಮದ ಚಿಂತನೆ ವಿಕಸನಗೊಳ್ಳಬೇಕು. ಸದ್ಗುಣಗಳನ್ನು ಬೆಳಸಿಕೊಳ್ಳಬೇಕು. ಅಂತಹ ಶಿಕ್ಷಣವನ್ನು ಈ ವಿದ್ಯಾಸಂಸ್ಥೆ ನೀಡುತ್ತಿದೆ.
ಬೆಳಕಿನ ಸಂಕೇತವಾದ ದೀಪವನ್ನು ಇಂದು ಹಸ್ತಾಂತರಿಸಿದ್ದೀರಿ. ದೀಪ ಕತ್ತಲನ್ನು ನಿವಾರಿಸುತ್ತದೆ. ಹಾಗೆ ಒಂದು ದೀಪ ಇನ್ನೊಂದು ದೀಪವನ್ನು ಬೆಳಗುತ್ತದೆ. ಈ ದೀಪದ ಬೆಳಕಿನಂತೆ ಹಿರಿಯ ವಿದ್ಯರ‍್ಥಿಗಳ ಸದ್ಗುಣಗಳನ್ನು ಕಿರಿಯ ವಿದ್ಯಾರ್ಥಿಗಳು ಮುಂದುವರಿಸಿ ಹಾಗೂ ತಾವು ಪಡೆದ ಸಂಸ್ಕಾರ ಭರಿತವಾದ ಶಿಕ್ಷಣವು ಗಟ್ಟಿಯಾಗಿ ಬೇರೂರಿ ಭವಿಷ್ಯ, ಮನುಸ್ಸು , ಜಡವಾಗದೆ ನಿಮ್ಮ ಭವಿಷ್ಯ ಉಜ್ಟಲವಾಗಲಿ ” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮೊದಲಿಗೆ ೭ನೇ ತರಗತಿಯ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಹಿರಿಯರಿಂದ ತಿಲಕಧಾರಣೆ ಮಾಡಿಸಿಕೊಂಡು ಆಶೀರ್ವಾದ ಪಡೆದುಕೊಂಡರು.
ನಂತರ ತಮ್ಮ ಬಾಳಿನ ಪಥದಲ್ಲಿ ಜೀವನವೆಂಬ ಪುಷ್ಪ ಅರಳಿ ತನ್ನ ಕಂಪನ್ನು ಎಲ್ಲೆಡೆ ಪಸರಿಸಲಿ ಎಂಬ ಆಶಯದೊಂದಿಗೆ ಇದೀಗ ಕಿರಿಯ ವಿದ್ಯಾರ್ಥಿಗಳು ಹಿರಿಯ ವಿದ್ಯಾರ್ಥಿಗಳಿಗೆ ಪುಷ್ಪ ಪ್ರದಾನ ಮಾಡಿದರು.
ನಂತರ ವಿದ್ಯಾ ದೇಗುಲದಿ ತಾವು ಕಳೆದ ಸಂತೋಷದ ಮಧುರ ಕ್ಷಣಗಳ ಸವಿ ನೆನಪುಗಳನ್ನು ೭ನೇ ತರಗತಿಯ ವಿದ್ಯರ‍್ಥಿಗಳು ಅನಿಸಿಕೆಯ ಮೂಲಕ ವ್ಯಕ್ತ ಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ೫ನೇ ತರಗತಿಯ ಅಪ್ರಮೇಯ ಪ್ರೇರಣಾ ಗೀತೆ ಹಾಡಿದನು.
ನಂತರ ೭ನೇ ತರಗತಿಯ ವಿದ್ಯಾರ್ಥಿಗಳು ಜ್ಞಾನದ ಸಂಕೇತವಾದ ದೀಪವನ್ನು, ೬ನೇ ತರಗತಿಯ ವಿದ್ಯಾರ್ಥಿಗಳಿಗೆ ತಮ್ಮ ಜೀವನಕ್ಕೆ ಆ ದೀಪ ಪ್ರತಿಯೊಬ್ಬರಿಗೂ ದಾರಿದೀಪವಾಗಲಿ ಎಂದು ಆಶಿಸುತ್ತಾ, “ದೀಪ ಪ್ರದಾನ” ಮಾಡಿದರು.
ವೇದಿಕೆಯಲ್ಲಿ ಕಲ್ಯಾಣ ಮಹಾರಾಷ್ಟ್ರದ ಶಾಸಕ ನರೇಂದ್ರ ಬಾಬುರಾವ್, ಮಹಾರಾಷ್ಟ್ರದ ಸಮಿತ್ ಇನ್ಫೋಟೈನ್ಮೆಂಟ್ ನ ಆಡಳಿತ ಪಾಲುದಾರ ಕ್ಷಿತಿಜ್ ನಾಗ್ಲೆ, ಹೈದರಾಬಾದ್ ನ ಕೆ.ಪಿ. ಸಿ. ಪ್ರಾಜೆಕ್ಟ್ ನ ನಿರ್ದೆಶಕ ಸಿ.ಎಂ. ಸಾಯಿ ರತನ್, ಮಂಗಳೂರಿನ ವಿ.ಕೆ. ರ‍್ನಿಚರ್ & ಎಲೆಕ್ಟ್ರಾನಿಕ್ಸ್ ನ ಆಡಳಿತ ನಿರ್ದೇಶಕ ವಿಠಲ್ ಕುಲಾಲ್, ಕುಟುಂಬ ವೈದ್ಯರ ಸಂಘದ ಕಾರ್ಯದರ್ಶಿ ಡಾ| ಜಿ.ಕೆ. ಭಟ್ ಸಂಕ ಬಿತ್ತಿಲು, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದ ಅಧ್ಯಕ್ಷ ಡಾ|ಶ್ರೀಪತಿ ಕಲ್ಲೂರಾಯ, ವಿವೇಕಾನಂದ ಪದವಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ, ಮಂಗಳೂರಿನ ಜ್ಞಾನ ರತ್ನ ಎಜುಕೇಶನ್ & ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಭಾಸ್ಕರ ದೇವಸ್ಯ ಹಾಗೂ ಸಹೋದರ ಪುರುಷೋತ್ತಮ ದೇವಸ್ಯ , ಸಚಿನ್, ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಎನ್, ರಾಷ್ಟ್ರ ಸೇವಿಕಾ ಸಮಿತಿಯ ರ‍್ನಾಟಕ ದಕ್ಷಿಣ ಪ್ರಾಂತ ಕರ‍್ಯಕಾರಿಣಿ ಸದಸ್ಯರಾದ ಡಾ| ಕಮಲಾ ಪ್ರಭಾಕರ್ ಭಟ್, ಹಾಗೂ ವಿಭಾಗ ಮುಖ್ಯಸ್ಥ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಸುಶ್ಮಿತಾ ಭಟ್ ಸ್ವಾಗತಿಸಿ, ರಾಜೇಶ್ವರಿ ಭಟ್ ವಂದಿಸಿದರು. ಚಿನ್ಮಯಿ ಎನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.