ಬಂಟ್ವಾಳ : ತೆಂಗು ಅಭಿವೃದ್ಧಿ ಮಂಡಳಿಯಿಂದ ತೆಂಗಿನಕಾಯಿಯ ಹಾಲಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಾಗುತ್ತಿದೆ. ತೆಂಗಿನ ಕೃಷಿ ಉತ್ಪಾದನೆ ಹೆಚ್ಚಿಸಲು ಕ್ರಮ, ಹಳೆ ತೆಂಗಿನ ತೋಟಗಳ ಪುನಶ್ಚೇತನ, ರಪ್ತು ಹೆಚ್ಚಿಸುವುದು, ಉತ್ಪಾದನೆಯಲ್ಲಿ ಮೌಲ್ಯ ವರ್ಧನೆ, ಕಡಿಮೆ ನೀರು ಉಪಯೋಗಿಸಿ. ತೆಂಗನ್ನು ಪರಿಸರ ಸ್ನೇಹಿ ಬಹುಬೆಳೆಯ ತೋಟವಾಗಿಸಬೇಕು ಎಂದು ರಾಜ್ಯ ಕೃಷಿ ಮತ್ತು ಕೇಂದ್ರ ಸರಕಾರದ ರೈತ ಕ್ಷೇಮಾಭಿವೃದ್ಧಿ ಇಲಾಖೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಮಾ . 11ರಂದು ಕಿದು ತೋಟಗಾರಿಕಾ ಬೆಳೆಗಳ ಸಂಶೋಧನಾ ಕೇಂದ್ರದಲ್ಲಿ ನಡೆದ ಕೃಷಿ ಸಮ್ಮೇಳನವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಬಳಿಕ ಕಲ್ಪ ಸುವರ್ಣ ಗಿಡ್ಡ , ಕೊಕ್ಕೊ ಸಂಕರಣ ಒಂದು. ಎರಡು ಈ ತಳಿಗಳನ್ನು ಬಿಡುಗಡೆಗೊಳಿ ನಮ್ಮಲ್ಲಿ ಬೆಳೆಯುವ ಅಡಿಕೆ, ತೆಂಗು ಉತ್ತರ ಭಾರತದಲ್ಲಿ ಮಾರುಕಟ್ಟೆ ಹೊಂದಿದೆ ಎಂದರು.
ಅಡಿಕೆ ಆರೋಗ್ಯಕ್ಕೆ ಪೂರಕ ಅಲ್ಲ ಎಂಬ ಅಭಿಪ್ರಾಯದ ಬಗ್ಗೆ ಪ್ರಕರಣ ನ್ಯಾಯಾಲಯದಲ್ಲಿದೆ. ಮೂಲ ಅಡಿಕೆ ಹಾನಿಕಾರಕ ಅಲ್ಲ. ಅದಕ್ಕೆ ಇತರ ಮಾದಕ ವಸ್ತುಗಳ ಸೇರ್ಪಡೆಯಿಂದ ಸಮಸ್ಯೆ ಆಗಿದೆ.
ಅಡಿಕೆ ಆರೋಗ್ಯ ವರ್ಧಕ ಎಂಬ ವೈಜ್ಞಾನಿಕ ವರದಿ ಬೇಕು. ಪ್ರತಿಷ್ಠಿತ ಸಂಸ್ಥೆಗಳ ಮೂಲಕ ಅಡಿಕೆಯ ಅಧ್ಯಯನ ಮಾಡಲು 10 ಕೋಟಿ ರೂ. ಇಡಲಾಗಿದೆ ಎಂದರು.
ಸಾರ್ಕ್ ದೇಶಗಳ ಹೆಸರಲ್ಲಿ ಅಡಿಕೆ ಬೆಳೆಯದ ದೇಶಗಳಿಂದ ಅಡಿಕೆ ಆಮದು ಆಗುತ್ತಿರುವುದು ಸಮಸ್ಯೆಯಾಗಿತ್ತು. ಆಮದು ದರ ಸುಂಕವನ್ನು ಏರಿಸಿ ಆಮದು ಸಮಸ್ಯೆ ನಿವಾರಿಸುವ ಕ್ರಮ ಆಗಿತ್ತು. ಆಡಿಕೆ ದರ ಉಳಿಸಿಕೊಳ್ಳಲು ಸಿಂಗಲ್ ಎಚ್.ಎಸ್. ಕೋಡ್ ನಲ್ಲಿ ಆಮದು ಕ್ರಮ ಕೈಗೊಳ್ಳಲಾಯಿತು.
ಭೂತಾನ್ ನಿಂದ ಅಡಿಕೆ ಆಮದು ಸಂಪೂರ್ಣ ನಿಷೇಧಿಸಲಾಗಿದೆ. ಅಡಿಕೆ ಆಮದು ವಿದೇಶದಿಂದ ಆಗುತ್ತಿದೆ ಎಂಬ ಪುಕಾರು ದರ ಕಡಿಮೆ ಮಾಡುವ ತಂತ್ರಗಳು ಆಗಿದೆ. ಎಲೆಚುಕ್ಕೆ ಮತ್ತು ಹಳದಿ ರೋಗ ಅಧ್ಯಯನಕ್ಕೆ ಕೇಂದ್ರದಿಂದ ರೂ. 235 ಕೋಟಿ ರಾಜ್ಯ ಸರ್ಕಾರಕ್ಕೆ ನೀಡಿದೆ. ಕೇಂದ್ರ ಸರಕಾರವು ಕೊಬ್ಬರಿಯನ್ನು ಟನ್ಗೆ 11, 700 ರಲ್ಲಿ ಖರೀದಿಸಿ 6500ಕ್ಕೆ ಮಾರಾಟವಾಗಿದ್ದು ಕೊಟ್ಯಾಂತರ ನಷ್ಟವಾಗಿದೆ.
ತೆಂಗಿನ ಎಲ್ಲಾ ವಸ್ತುಗಳು ಅಪಾರ ಬೇಡಿಕೆ ಇದೆ. ತಮಿಳುನಾಡು ತೆಂಗಿನ ಸಿಪ್ಪೆ ಪುಡಿ, ಗೆರಟೆಯ ಕೋಲ್ ಮಾಡಿ ಅಪಾರ ವಿದೇಶಿ ವಿನಿಮಯ ಪಡೆಯುತ್ತಿರುತ್ತಾರೆ. ಕರ್ನಾಟಕದ ರೈತರು ಈ ಬಗ್ಗೆ ಗಮನಿಸಬೇಕು.
ಖಾದ್ಯ ತೈಲದಲ್ಲಿ ದೇಶ ಸ್ವಾವಲಂಬಿ ಆಗಬೇಕು ಎಂಬ ಉದ್ದೇಶ ಹೊಂದಿದೆ. ತೆಂಗು ಅಡಿಕೆಯಲ್ಲಿ ಹವಾಗುಣಕ್ಕೆ ಹೊಂದುವ 2500 ಅಧಿಕ ಗುಣಮಟ್ಟದ ತಳಿಗಳ ಅಭಿವೃದ್ಧಿಯನ್ನು ವಿಜ್ಞಾನಿಗಳು ಸಾಧಿಸಿದ್ದಾರೆ ಅದಕ್ಕಾಗಿ ಅವರಿಗೆ ಅಭಿನಂದನೆಗಳು ಎಂದರು.
ಮಿಶ್ರ ಬೆಳೆ, ಪೂರಕ ಬೆಳೆದ ರೈತರು ಆತ್ಮಹತ್ಯೆ ಮಾಡಿಕೊಂಡಿಲ್ಲ. ಹಾಗಾಗಿ ಮಿಶ್ರ ಬೆಳೆಗೆ ಆದ್ಯತೆ ನೀಡಲಾಗುವುದು ಎಂದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ ವಿವಿಧ ಬೆಳೆಗಳ ತಿಳುವಳಿಕೆ, ಕೃಷಿ ಬದುಕು ಉತ್ತಮವಾಗಲಿ. ಸಮಾವೇಶದಿಂದ ರೈತರಿಗೆ ವೈಜ್ಞಾನಿಕ ಮಾಹಿತಿ ವರ್ಗಾವಣೆ ಆಗಲಿ ಎಂದರು.
ತೋಟಗಾರಿಕಾ ಬೆಳೆಗಳ ಕೇಂದ್ರ ನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ಮಾತನಾಡಿ ಕೃಷಿಯ ಪರಿಸರ ಪರಿಣಾಮಗಳ ಬಹುವಿಧ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದು ಅವಶ್ಯ. ಅಭಿವೃದ್ಧಿ, ಮಾರುಕಟ್ಟೆ, ಮೌಲ್ಯವರ್ಧನೆಗೆ ಆದ್ಯತೆ ನೀಡಬೇಕು. ಎಂದರು.
ಪ .ಜಾತಿ, ಪಂಗಡದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಿಪಿಸಿಆರ್ಐ ತೋಟಗಾರಿಕಾ ಕಮಿಷನರ್ ಡಾ. ಪ್ರಭಾತ್ ಕುಮಾರ್, ಡಾ. ಹೋಮಿ ಚೆರಿಯನ್, ಬಿಳಿನೆಲೆ ವಾರ್ಡ್ ಸದಸ್ಯ ಸತೀಶ್ ಕಳಿಗೆ ವೇದಿಕೆಯಲ್ಲಿದ್ದರು.
ಕಾಸರಗೋಡು ಸಿಪಿಸಿಆರ್ ಐ ಡಾ. ಕೆ.ಬಾಲಕೃಷ್ಣ ಹೆಬ್ಬಾರ್ ಪ್ರಸ್ತಾವನೆ ನೀಡಿ ಸ್ವಾಗತಿಸಿದರು. ಬೆಳೆ ಅಭಿವೃದ್ಧಿ ಮುಖ್ಯಸ್ಥೆ ಡಾ. ವಿ. ನಿರಾಲ್ ವಂದಿಸಿದರು.