ದೇರಳಕಟ್ಟೆಯಲ್ಲಿರುವ ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದಲ್ಲಿ ಯೆನೆಪೋಯ ಜುಲೇಖಾ ಕ್ಯಾನ್ಸರ್ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವದ ಅಂಗವಾಗಿ ಸ್ಕೋಪ್ ಮಾಸ್ಟರ್ ಆಶ್ರಯದಲ್ಲಿ ಒಂದು ದಿನದ ಕೊಲೋಸ್ಕೋಪಿ ನೇರ ಪ್ರಸಾರದ ಕಾರ್ಯಕ್ರಮವನ್ನು ಫೆಬ್ರವರಿ ೧೦ ರಂದು ನಡೆಯಿತು .
ಈ ನೇರಪ್ರಸಾರ ಕಾರ್ಯಕ್ರಮನ್ನು ಫೋಗ್ಸಿ (FOGSI) ಕ್ಸೋಗ(KSOGA) ಮತ್ತು ಕೆ.ಎಸ್.ಸಿ -ಅಗೊಯಿ (KSC-AGOI) ಗಳ ಸಹಭಾಗಿತ್ವದಲ್ಲಿ ಯೇನೆಪೋಯ ಜುಲೇಖ ಕ್ಯಾನ್ಸರ್ ಆಸ್ಪತ್ರೆಯ ಸ್ತೀ ರೋಗ ಕ್ಯಾನ್ಸರ್ ತಜ್ಞೆ, ಮತ್ತು ಲ್ಯಾಪ್ರೋಸ್ಕೋಪಿಕ್ ಹಾಗು ರೋಬೋಟಿಕ್ ಶಸ್ತç ಚಿಕಿತ್ಸಾ ತಜ್ಞರಾದ ಡಾ. ಮರಿಯಮ್ ಅಂಜುಮ್ ಇಫ್ತಿಕಾರ್ ಆಯೋಜಿಸಿದರು.

ಯೆನೆಪೋಯ (ಪರಿಗಣಿಸಲ್ಪಟ್ಟ) ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಅಬ್ದುಲ್ಲ ಕುಂಞ್ಙ ಅವರು ಈ ಕರ‍್ಯಕ್ರಮದ ಉದ್ಘಾಟನೆಯನ್ನು ನೇರವೇರಿಸಿದರು. ಇಂತಹ ಸ್ತುತಾರ್ಹ ವಿಚಾರಗೋಷ್ಠಿಯನ್ನು ಆಯೋಜಿಸಿದ ಯೆನೆಪೋಯ ಜುಲೇಖ ಸಂಸ್ಥೆ ಕ್ಯಾನ್ಸರ್ ಆಸ್ಪತ್ರೆ, ಉಪಕುಲಪತಿಗಳಾದ ಡಾ. ಎಮ್. ವಿಜಯಕುಮಾರ್ ಹಾಗೂ ಡಾ. ಮರಿಯಮ್ ಅಂಜುಮ್ ಇಫ್ತಿಕಾರ್‌ರವರುಗಳ ಪರಿಶ್ರಮವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿದ್ದ ಉಪಕುಲಪತಿ ಡಾ.ಎಮ್. ವಿಜಯಕುಮಾರ್ ತಮ್ಮ ಭಾಷಣದಲ್ಲಿ ಗರ್ಭಕಂಠದ ಕ್ಯಾನ್ಸರನ್ನು ಪ್ರಾಥಮಿಕ ಹಂತದಲ್ಲಿಯೇ ಪತ್ತೆಹಚ್ಚುದರ ಪ್ರಾಮುಖ್ಯತೆಯ ಬಗ್ಗೆ ಒತ್ತಿ ಹೇಳಿದರು. ವೈದ್ಯಕೀಯ ಕಾಲೇಜುಗಳು ೨೦೦ಕ್ಕಿಂತ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ ಇಂತಹ ಕಾರ್ಯಕ್ರಮವನ್ನು ಡಾ. ಮರಿಯಮ್ ಅಂಜುಮ್ ಇಫ್ತಿಕಾರ್ ಅವರ ಪ್ರಯತ್ನವನ್ನು ಶ್ಲಾಘಿಸಿದರು.

ಮೋಗ್ಸ್ ಅಧ್ಯಕ್ಷರಾದ ಡಾ. ಅರುಣ್ ಕಾಮತ್ ಹಾಗೂ ಯೆನೆಪೋಯ ವೈಧ್ಯಕೀಯ ಕಾಲೇಜು-ಸ್ತಿçÃರೋಗ ಹಾಗೂ ಪ್ರಸೂತಿ ಶಾಸ್ತ್ರ ವಿಭಾಗದಲ್ಲಿ ದೀರ್ಘಕಾಳ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ವಿಕ್ಟರ್ ರಸ್ಕೀನ್ಹಾರವರನ್ನು ಈ ಸಂಧರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ವೈಜ್ಞಾನಿಕ ಅಧಿವೇಷಣದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಸಹ ಪ್ರಾಧ್ಯಪಕರಾದ ಡಾ. ಜೋಯ್ಸಿನ್ ಡಿ. ಅಲ್ಮೇಹಾ ಅವರು ಹೆಚ್.ಪಿ.ವಿ ವ್ಯಾಕ್ಸೀನ್ ಕುರಿತು, ರಾಷ್ಟಿçÃಯ ಸಂಪನ್ಮೂಲ ವ್ಯಕ್ತಿಗಳಾದ ಡಾ ಶೋಭಾ ಕೆ ಹಾಗೂ ಡಾ ಕಿರಣ್ ಕುಲಕರ್ಣಿ ಗರ್ಭ ಕಂಠದ ಕ್ಯಾನ್ಸರ್ ತಪಾಸಣೆ ಮಾರ್ಗದರ್ಶಕ ಸೂಕ್ತಗಳು ಹಾಗೂ ಹೆಚ್.ಪಿ.ವಿ ಸೆಲ್ಫ್ ಸ್ಕ್ಯಾನಿಂಗ್‌  ಕುರಿತು ಲೀಡ್ ಫ್ಯಾಕಲ್ಟಿ ಸದಸ್ಯರಾದ ಡಾ. ಪ್ರಿಯಾ ಗಣೇಶ್ ಕುಮಾರ್, ಕೊಲೊಸ್ಕೋಪಿಯ ನೇರ ಪ್ರದರ್ಶನವನ್ನು ನೀಡಿ ಗರ್ಭಕಂಠದ ಕ್ಯಾನ್ಸರನ್ನು ಪ್ರಾಥಮಿಕ ಹಂತದಲ್ಲಿ ಪತ್ತೆಹಚ್ಚಲು ಕೊಲೊಸ್ಕೋಪಿಯ ಪಾತ್ರ ಹಾಗೂ ವ್ಯಾಕ್ಸಿನೇಶನ್ ಕರ‍್ಯಕ್ರಮದ ಕುರಿತು ಅಧಿವೇಶನ ನಡೆಸಿಕೊಟ್ಟರು. ಅವರು ಯೆನೆಪೋಯ ಜುಲೇಖ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯಾಧುನಿಕ ಸೌಲಭ್ಯವುಲ್ಲ ಬೈನಾಕುಲರ್ ಕೊಲ್ಪೋಸ್ಕೋಪಿ ವ್ಯವಸ್ಥೆ ಕುರಿತು ಶ್ಲಾಘಿಸಿದರು.

ಈ ಕರ‍್ಯಕ್ರಮದಲ್ಲಿ ಡಾ. ನೇಹಾ ಕಾಮತ್ ಕರ‍್ಯಕ್ರಮವನ್ನು ನಿರೂಪಿಸಿದರು. ಯೆನೆಪೋಯ ಜುಲೇಖ ಕ್ಯಾನ್ಸರ್ ಆಸ್ಪತ್ರೆಯ ಸಹಾಐಕ ವೈದ್ಯಕೀಯ ಅಧ್ಯಕ್ಸರಾದ ಡಾ ಬೊನಿ ಪೌಲ್ ವಂದನಾರ್ಪನೆ ಮಾಡಿದರು.