ಪಕ್ಷದ ವರಿಷ್ಠರೂ ಆದ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಮಾನ್ಯ ಅಮಿತ್‌ ಷಾ ಅವರ ನೇತೃತ್ವದಲ್ಲಿ ಪಕ್ಷದ ಮೈಸೂರು ಕ್ಲಸ್ಟರ್ ವಿಭಾಗದ ಪ್ರಮುಖರೊಂದಿಗೆ ಸಭೆ ನಡೆಸಲಾಯಿತು.

ಭವ್ಯ ಭಾರತ ನಿರ್ಮಿಸುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಾರಿಗೆ ಬಂದಿರುವ ಜನಕಲ್ಯಾಣ ಯೋಜನೆಗಳು, ದೇಶದ ಜನರ ಬದುಕು ಬದಲಿಸಿದ್ದು ಪ್ರತಿ ಮನೆ ಮನಗಳನ್ನು ತಲುಪಿ ವಿರಮಿಸದೇ ಶ್ರಮಿಸುವ ಮೂಲಕ ಮಗದೊಮ್ಮೆ ಮೋದಿಜೀ ಎಂಬ ಸಂಕಲ್ಪ ತೊಡಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಚುನಾವಣಾ ಉಸ್ತುವಾರಿಗಳಾದ ಶ್ರೀ ಡಾ. ರಾಧ ಮೊಹನ್‌ ದಾಸ್‌ ಅಗರ್‌ವಾಲ್, ವಿರೋಧ ಪಕ್ಷ ನಾಯಕರಾದ ಶ್ರೀ ಆರ್. ಅಶೋಕ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಹಾಗೂ ಮೈಸೂರು ಕ್ಲಸ್ಟರ್ ವಿಭಾಗದ ಪ್ರಮುಖರು ಉಪಸ್ಥಿತರಿದ್ದರು.