ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ  ಯೋಜನೆ ಬಿ.ಸಿ ಟ್ರಸ್ಟ್ ರಿಜಿಸ್ಟರ್ ಬಂಟ್ವಾಳ ಇದರ ಕಾರ್ಯಕ್ಷೇತ್ರ ಪಾಣೆಮಂಗಳೂರು ವಲಯದ ಶೌರ್ಯ ವಿಪತ್ತು ಘಟಕವನ್ನು ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಮಾದವ ಗೌಡ ಉದ್ಘಾಟಿಸಿದರು.

ಬಳಿಕ ಮಾತನಾಡಿ ಶೌರ್ಯ ವಿಪತ್ತು ಘಟಕ ಉದ್ದೇಶ, ಅಧಿಕಾರ, ಕರ್ತವ್ಯ ಹಾಗೂ ಘಟಕದಿಂದ ಆಗುವ ಪ್ರಯೋಜನದ ಬಗ್ಗೆ ಮಾಹಿತಿಯನ್ನು ನೀಡಿದರು .

ಈ ಸಂದರ್ಭದಲ್ಲಿ ಶಂಭುರು ಒಕ್ಕೂಟದ ಅಧ್ಯಕ್ಷ ಕೃಷ್ಣಪ್ಪ ನಾಯ್ಕ್, ಜನಜಾಗ್ರತಿ ವೇದಿಕೆಯ ಸದಸ್ಯರಾದ ಪುರುಷೋತ್ತಮ್ ನಾಟಿ, ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್ ಮಡಿಮುಗೇರು, ಮಾಜಿ ಸದಸ್ಯರಾದ ಕೃಷ್ಣಪ್ಪ, ವಲಯ ಒಕ್ಕೂಟದ ಮಾಜಿ ಅಧ್ಯಕ್ಷರಾದ ವಾಮನ ಕುಲಾಲ್, ಒಕ್ಕೂಟದ ಪದಾಧಿಕಾರಿ ಬಬಿತ, ವಲಯ ಮೇಲ್ವಿಚಾರಕಿ ಅಮಿತಾ, ಸೇವಾಪ್ರತಿನಿಧಿ ಲಕ್ಷ್ಮಿ ಹಾಗೂ ಶೌರ್ಯ ವಿಪತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.