ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಶ್ರೀ ವಿದ್ಯಾಗಣಪತಿ ದೇವರ ಶಿಲಾನ್ಯಾಸದ ನಿಮಿತ್ತ ಆಗಮಿಸಿದ ಅವಧೂತ ಶ್ರೀ ವಿನಯ್ ಗುರೂಜಿ ಗೌರಿಗದ್ದೆ ಅವರು ಶ್ರೀರಾಮ ವಿದ್ಯಾಕೇಂದ್ರಕ್ಕೆ ಭೇಟಿ ನೀಡಿ, ಶಾಲೆಯ ಚಟುವಟಿಕೆಯನ್ನು ವೀಕ್ಷಿಸಿದರು.

ನಂತರ ವೇದವ್ಯಾಸ ಧ್ಯಾನಮಂದಿರದಲ್ಲಿ ಶ್ರೀರಾಮನಿಗೆ ದೀಪ ಬೆಳಗಿಸಿ, ಅಗ್ನಿಹೋತ್ರಕ್ಕೆ ಘೃತಾಹುತಿ ನೀಡಿ ಶ್ರೀ ರಾಮನಾಮ ತಾರಕ ಜಪ ಹಾಗೂ ಸರಸ್ಪತಿ ವಂದನೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಆರ್ಶೀವಚನ ನೀಡಿದರು.

ಈ ಸಂದರ್ಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ|ಪ್ರಭಾಕರ್ ಭಟ್ ಕಲ್ಲಡ್ಕ, ಶಿರಸಿಯ ರಿಯಲ್ ಎಸ್ಟೇಟ್ ಉದ್ಯಮಿ, ಸಾಮಾಜಿಕ ಹೋರಾಟಗಾರರಾದ ಶ್ರೀ ಅನಂತಮೂರ್ತಿ ಹೆಗಡೆ, ಕಾಪು ವಿಧಾನಸಭೆ ಕ್ಷೇತ್ರದ ಶಾಸಕರಾದ ಶ್ರೀ ಗುರ್ಮೆ ಸುರೇಶ್ ಶೆಟ್ಟಿ, ಹೈಕೋರ್ಟ್ ನ ಖ್ಯಾತ ನ್ಯಾಯವಾದಿ, ಹಿರಿಯ ವಿದ್ಯಾರ್ಥಿಯಾದ ಶ್ರೀ ಅರುಣ್ ಶ್ಯಾಮ್, ಆರ್ಥಿಕ ತಜ್ಞೆಯಾದ ಶ್ರೀ ದಿವ್ಯ ಪಾದೆಕಲ್ ಉಪಸ್ಥಿತರಿದ್ದರು.