ನೆಪೋಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ ವಿಭಾಗದ ಸಹಯೋಗದೊಂದಿಗೆ ಯೆನಾರ್ಟಿಫಿಷಿಯಾ ವಿದ್ಯಾರ್ಥಿಗಳ ಸಂಘವು ಆಯೋಜಿಸಿದ ಅನ್ಸ್ಕ್ರ್ಯಾಂಬಲ್ 2.0 ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಕಾರ್ಯಕ್ರಮನ್ನು ಉಡುಪಿಯ ರೋಬೋಸಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನ ಕ್ಯಾಂಪಸ್ ರಿಲೇಶನ್ಶಿಪ್ ಮ್ಯಾನೇಜರ್ ಶ್ರೀಮತಿ ಲಕ್ಷ್ಮೀ ಶೆಟ್ಟಿ ಉದ್ಘಾಟಿಸಿದರು.
ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಮಹಮ್ಮದ್ ಸಿರಾಜ್ ಸ್ವಾಗತ ಭಾಷಣ ಮಾಡಿದರು. ಡಾ.ಆರ್.ಜಿ.ಡಿಸೋಜಾ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀಮತಿ ಲಕ್ಷ್ಮೀ ಶೆಟ್ಟಿ ಅವರಿಗೆ ಕ್ಯಾಂಪಸ್ ಆಡಳಿತಾಧಿಕಾರಿ ಶ್ರೀ ಮೊಹಮ್ಮದ್ ಶಾಹಿದ್ ಸ್ಮರಣಿಕೆ ನೀಡಿ ಗೌರವಿಸಿದರು.
ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ಲರ್ನಿಂಗ್ (ಎಐಎಂಎಲ್) ವಿಭಾಗದ ಮುಖ್ಯಸ್ಥ ಪ್ರೊ. ಪ್ರಸನ್ನ ಕುಮಾರ್ , ಎಐಎಂಎಲ್ನ ವಿವಿಧ ವಿಭಾಗಗಳ ಎಚ್ಒಡಿಗಳು, ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಒಟ್ಟು 85+ ತಂಡಗಳು ನೋಂದಾಯಿಸಲ್ಪಟ್ಟವು, ಅದರಲ್ಲಿ ಉತ್ತಮವಾದ 20 ತಂಡಗಳನ್ನು ಆಯ್ಕೆ ಮಾಡಲಾಯಿತು. ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸಿಮ್ರಾ ಅವರು ಆಯ್ಷಾ ಅವರೊಂದಿಗೆ ಯೆನಾರ್ಟಿಫಿಷಿಯಾ ವಾರ್ಷಿಕ ವರದಿ ವಾಚಿಸಿದರು.
ವೈಐಟಿಯ ಪ್ರಾಂಶುಪಾಲರಾದ ಡಿʼ ಸೋಜಾ ಮತ್ತು ಡಾ.ಆರ್.ಜಿ ಅವರ ಸ್ವಾಗತಿಸಿದರು.
ಅಮೀಜಾ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲಾ ಭಾಗಿದಾರರಿಗೆ, ಪ್ರಾಯೋಜಕರಿಗೆ ಮತ್ತು ಸಂಘಟಕರಿಗೆ ಅಫೀಫ್ ವಂದಿಸಿದರು.
ಎಐಎಂಎಲ್ನ ದ್ವಿತೀಯ ವರ್ಷದ ವಿದ್ಯಾರ್ಥಿ ಎಂ.ಸಿ. ಅಫೀಫ್ ಇಸ್ಮಾಯಿಲ್ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ರಮ್ಯಾ ಎ., ಶಾದಿಲ್ ಇಬ್ರಾಹಿಂ, ಅಹಮದ್ ಆಶಿಕ್ ಮತ್ತು ಶಾನವಾಜ್ ಸಂಯೋಜಿಸಿದರು.