ಬಂಟ್ವಾಳ ತಾಲೂಕಿನ ನರಿಕೊಂಬು ದ ಕ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಪ್ರಯುಕ್ತ ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಧ್ವಜಾರೋಹಣ ನೆರೆವೇರಿಸಿದರು.

ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಶಿಸ್ತು ಬದ್ಧ ಪಥಸಂಚಲನ, ಸಾಮೂಹಿಕ ತಾಳ ಬದ್ಧ ಕವಾಯತು ನಡೆಯಿತು.

ಗಣರಾಜ್ಯೋತ್ಸವದ ಮಹತ್ವದ ಕುರಿತು ಆಶಿತಾ ಮಾತನಾಡಿದರು. ವಿದ್ಯಾರ್ಥಿಗಳಿಂದ ಗಣರಾಜ್ಯೋತ್ಸವದ ಬಗ್ಗೆ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷೆ ಉಷಾಲಕ್ಷಿ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಮೇಘನಾ, ಜಯಶ್ರೀ, ರಶ್ಮಿ, ಶಶಿಕಲಾ,ಚಿತ್ರಾವತಿ, ಕಮಲಾಕ್ಷ, ಕೇಶವ, ತಾಯಂದಿರ ಸಮಿತಿ ಅಧ್ಯಕ್ಷ ಜಯಶ್ರೀ, ಸದಸ್ಯರಾದ ಆಶಾ, ಶಿಕ್ಷಕರು, ವಿದ್ಯಾರ್ಥಿಗಳು, ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಶಾಲಾ ಮುಖ್ಯೋ ಶಿಕ್ಷಕಿ ಪ್ರೇಮ ಇವರು ಸ್ವಾಗತಿಸಿ ದಿವ್ಯಶ್ರೀ ವಂದಿಸಿ, ಧ್ವಜನಿ ಶ್ರೀಹರ ಕಾರ್ಯಕ್ರಮ ನಿರೂಪಿಸಿದರು.