ಕಲ್ಲಡ್ಕ : ಹದಿಹರೆಯದ ಮಕ್ಕಳು ದಾರಿ ತಪ್ಪಲು ಪೋಷಕರೇ ಕಾರಣಕರ್ತರಾಗಿರುತ್ತಾರೆ, ಮಕ್ಕಳಿಗೆ ತಿದ್ದಿ ಬುದ್ದಿ ಹೇಳುವ ಸಮಯದಲ್ಲಿ ಮಕ್ಕಳ ಅನುಕರಣೆಯನ್ನು ಗಮನಿಸದೆ ಇರುವುದರಿಂದ ಮಕ್ಕಳು ಪ್ರೌಢಾವಸ್ಥೆಗೆ ಬಂದ ಕೂಡಲೇ ದಾರಿ ತಪ್ಪುತ್ತಿದ್ದಾರೆ ಎಂದು ಜ್ಞಾನ ದೀಪ ಶಿಕ್ಷಕಿ, ನಿರೂಪಕಿಯು ಆದ ರೇಣುಕಾ ಕಣಿಯೂರು ಅಭಿಪ್ರಾಯ ಪಟ್ಟರು.
ಅವರು ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಕೆಲಿಂಜ ಶ್ರೀನಿಕೇತನ ಮಂದಿರದ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಡಿ ಯೋಜನೆ ಬಿ ಸಿ ಟ್ರಸ್ಟ್ (ರೀ )ವಿಟ್ಲ ಇದರ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ “ಹದಿಹರೆಯದ ಮಕ್ಕಳನ್ನು ಬೆಳೆಸುವಲ್ಲಿ ಹೆತ್ತವರ ಪಾತ್ರ ” ಎಂಬ ವಿಷಯದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತಾಡಿದರು.
ಮಕ್ಕಳನ್ನು ಶಾಲೆಯ ತರಗತಿಯಲ್ಲಿ ಪಡೆಯುವ ಅಂಕಗಳ ಹಿಂದೆ ಹೋಗದೆ ಸಂಸ್ಕಾರ, ಸಂಸ್ಕೃತಿಯ ಹಿಂದೆ ಹೋಗುವಂತೆ ಬೆಳೆಸಬೇಕೆಂದು ಮಾತೆಯರಿಗೆ ಕಿವಿಮಾತು ಹೇಳಿದರು.
ವೀರಕಂಭ ಗ್ರಾಮ ಪಂಚಾಯತ್ ಆಧ್ಯಕ್ಷೆ ಲಲಿತಾ ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಯೋಜನೆಯ ಕಲ್ಲಡ್ಕ ವಲಯ ಆಧ್ಯಕ್ಷೆ ತುಳಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಹಿಳೆಯರಲ್ಲಿ ಅರಿವು ಮೂಡಿಸಿ ಮಾತೆಯರನ್ನು ಸ್ವಾವಲಂಬಿಗಳಾಗಿ ಮಾಡಿಸುವ ಉದ್ದೇಶದಿಂದ ಪ್ರಾರಂಭವಾದ ಕೇಂದ್ರವೇ ಮಹಿಳಾ ಜ್ಞಾನವಿಕಾಸ ಕೇಂದ್ರಗಳು. ಈ ಮುಖೇನ ಮಹಿಳೆಯರಿಗೆ ಸೂಕ್ತ ಮಾಹಿತಿ, ತರಬೇತಿ ನೀಡಿ ಸ್ವಾಲಂಬಿ ಜೀವನ ನಡೆಸಲು ಪ್ರೇರೇಪಿಸಿ, ನಾಯಕತ್ವ ಗುಣವನ್ನು ಹೊಂದುವಂತೆ ಮಾಡಿ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ಬರುವಂತೆ ಮಾಡುವ ಕೆಲಸವಾಗುತಿದೆ ಎಂದರು.
ಈ ಸಂದರ್ಭದಲ್ಲಿ ಜ್ಞಾನವಿಕಾಸ ತಂಡಗಳಿಗೆ ಹೂ ಗುಚ್ಚ ತಯಾರಿ, ರಂಗೋಲಿ, ಸಾಂಸ್ಕೃತಿಕ ನೃತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಕಲ್ಲಡ್ಕ ವಲಯ ಜನಜಾಗ್ರತಿ ವೇದಿಕೆ ಅಧ್ಯಕ್ಷ ಬಟ್ಯಪ್ಪ ಶೆಟ್ಟಿ, ಕೆಲಿಂಜ ಹಿಂದೂ ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಚೇತನ್ ಶೆಟ್ಟಿ ಪೆಲತಡ್ಕ, ಅಳಿಕೆ ವಲಯ ಅಧ್ಯಕ್ಷ ರಾಜೇಂದ್ರ ರೈ, ಮಾಣಿ ವಲಯ ಅಧ್ಯಕ್ಷ ಸುಧಾಕರ್, ಕೆಲಿಂಜ ಒಕ್ಕೂಟ ಅಧ್ಯಕ ದಯಾನಂದ, ಮಾಮೇಶ್ವರ ಒಕ್ಕೂಟ ಅಧ್ಯಕ್ಷ ಹರೀಶ್ ವಿ ಮಾಡ, ನೆಟ್ಲಾ ಒಕ್ಕೂಟ ಅಧ್ಯಕ್ಷಸೀತಾರಾಮ್,ಯೋಜನೆಯ ಕೃಷಿ ಅಧಿಕಾರಿ ಚಿದಾನಂದ,ಮೊದಲದವರು ಉಪಸ್ಥಿತರಿದ್ದರು.
ಮಂಜುಳಾ ಮತ್ತು ಕಾವ್ಯ ಪ್ರಾರ್ಥಿಸಿ, ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ವಿಜಯಲಕ್ಷ್ಮಿ ವರದಿ ವಾಚಿಸಿ, ಸೇವಾ ಪ್ರತಿನಿಧಿ ರೇಣುಕ ವಂದಿಸಿದರು.
ಕಲ್ಲಡ್ಕ ವಲಯ ಮೇಲ್ವಿಚಾರಕಿ ಸುಗುಣ ಶೆಟ್ಟಿ ಹಾಗೂ ಕೇಪು ವಲಯ ಮೇಲ್ವಿಚಾರಕ ಜಗದೀಶ್ ಕಾರ್ಯಕ್ರಮನಿರೂಪಿಸಿದರು. ವಿಟ್ಲ ವಲಯ ಮೇಲ್ವಿಚಾರಕಿ ಸರಿತಾ, ಹಾಗೂ ಒಕ್ಕೂಟಗಳ ಸೇವಾ ಪ್ರತಿನಿದಿಗಳು ಸಹಕರಿಸಿದರು. ರೇಣುಕ ಕಾಣಿಯೂರು, ಚಂದ್ರ, ಪವಿತ್ರ ಕೆದಿಲ, ದುರ್ಗಾಪರಮೇಶ್ವರಿ ಸ್ಪರ್ಧೆಗಳ ತೀರ್ಪುಗಾರರಾಗಿ ಸಹಕರಿಸಿದರು.