ಭಾರತೀಯ ಜನತಾ ಪಾರ್ಟಿಯ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಂಡಲದ ಪದಾಧಿಕಾರಿಗಳ ಹಾಗೂ ಪ್ರಮುಖರ ಸಭೆಯು ಬಂಟ್ವಾಳ ಮಂಡಲದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಆರ್ ಚೆನ್ನಪ್ಪ ಕೋಟ್ಯಾನ್ ರವರ ಅಧ್ಯಕ್ಷತೆಯಲ್ಲಿ ನಿನ್ನೆ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.ಇದನ್ನೂ ಓದಿ: ತೆಲಂಗಾಣ | ಅಪಾರ್ಟ್ಮೆಂಟ್‌ವೊಂದರಲ್ಲಿ ನಾಪತ್ತೆಯಾಗಿದ್ದ ಕೃಷಿ ವಿಜ್ಞಾನಿಯೊಬ್ಬರ 5 ವರ್ಷದ ಬಾಲಕಿ ಶವವಾಗಿ ಪತ್ತೆ

ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸತೀಶ್ ಕುಂಪಲ ಉದ್ಘಾಟಿಸಿ ಸೇವಾ ಸಂಕಲ್ಪ ಅಭಿಯಾನ ಹಾಗೂ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡಿದರು ಅದಲ್ಲದೆ ವಿಶೇಷವಾಗಿ 7ನೇ ತಾರೀಕಿಗೆ ನಡೆಯುತ್ತಿರುವ ಸೇವಾ ಜ್ಯೋತಿ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯ ಪದಾಧಿಕಾರಿಗಳು ಪ್ರಮುಖರು ಚುನಾಯಿತ ಜನಪ್ರತಿನಿಧಿಗಳು ಕಾರ್ಯಕರ್ತ ಬಂಧುಗಳು ಈ ಕಾರ್ಯಕ್ರಮವನ್ನು ಯಶಸ್ವಿ ಮಾಡುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿಸಿಕೊಂಡರು.

ವಿಧಾನ ಪರಿಷತ್ತಿನ ಸದಸ್ಯರು ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ ಸೇವಾಜ್ಯೋತಿ ಅಭಿಯಾನದ ಕಾರ್ಯಕ್ರಮವು ಬಂಟವಾಳದ ಬಂಟರ ಭವನಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ 8 ಮಂಡಲದ ದೇವಸ್ಥಾನಗಳಿಂದ ಸೇವಾ ಜ್ಯೋತಿಯನ್ನು ಯಾತ್ರೆಯ ಮೂಲಕ ಬಂಟ್ವಾಳದ ಬಂಟರ ಭವನಕ್ಕೆ ಆಗಮಿಸಲಿದೆ ಈ ಸಂದರ್ಭದಲ್ಲಿ ನಾವೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ದಾಮೋದರ್ ದಾಸ್ ಮೋದಿಜೀ ಅವರ ಜನ್ಮದಿನವನ್ನು ಸಾರ್ಥಕ ಸೇವಾ ಮನೋಭಾವನೆಯ ಮೂಲಕ 25 ವರ್ಷಗಳ ಜನಸೇವೆಯ ಸಮರ್ಪಿತ ಬದುಕಿನ ಕಾರ್ಯದಲ್ಲಿ ನಾವೆಲ್ಲರೂ ಯಶಸ್ವಿಯಾಗಿ ಪಾಲ್ಗೊಳ್ಳೋಣ ಎಂದು ಶುಭ ಹಾರೈಸಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಂಟ್ವಾಳ ಮಂಡಲದ ಅಧ್ಯಕ್ಷರಾದ ಆರ್ ಚೆನ್ನಪ್ಪ ಕೋಟ್ಯಾನ್ ರವರು ಮಾತನಾಡಿ ಮುಂದೆ ಬರುವ ಗ್ರಾಮ ಪಂಚಾಯತ್ ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಬೂತ್ ಮಟ್ಟದಿಂದ ಹಿಡಿದು ಎಲ್ಲಾ ಕಾರ್ಯಕರ್ತರು ಪದಾಧಿಕಾರಿಗಳು ಸಕ್ರಿಯವಾಗಿ ಸಂಘಟನಾತ್ಮಕವಾಗಿ ಯಾವ ರೀತಿಯಲ್ಲಿ ಪಕ್ಷ ಸಂಘಟನೆ ಕಾರ್ಯಗಳನ್ನುಮಾಡಬೇಕೆನ್ನುವ ದೃಷ್ಟಿಯಿಂದ ಸಂಘಟನಾತ್ಮಕವಾಗಿ ಮಾಹಿತಿಯನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಂಗಳೂರಿನ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಪ್ರೇಮಾನಂದ ಶೆಟ್ಟಿ ಪಕ್ಷ ಸಂಘಟನಾತ್ಮಕವಾಗಿ ಮಾಹಿತಿಯನ್ನು ನೀಡಿದರು.

ಜಿಲ್ಲಾ ಉಪಾಧ್ಯಕ್ಷರು ಬಂಟ್ವಾಳ ಮಂಡಲದ ಪ್ರಭಾರಿಗಳಾದ ರಾಕೇಶ್ ರೈ ಶಕ್ತಿ ಕೇಂದ್ರದ ಮತ್ತು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮೋರ್ಚಾಗಳ ವರದಿಯನ್ನು ಹಾಗೂ ಮಂಡಲದ ಪದಾಧಿಕಾರಿಗಳ ಪ್ರವಾಸದ ಬಗ್ಗೆ ವರದಿಯನ್ನು ಹಾಗೂ ಸಂಘಟನಾತ್ಮಕ ವಿಚಾರದ ವರದಿಯನ್ನು ಪಡೆದರು.

ಈ ಸಂದರ್ಭದಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಮಾಜಿ ಶಾಸಕರುಗಳಾದ ಶ್ರೀ ಏ ರುಕ್ಮಯ್ಯ ಪೂಜಾರಿ ಶ್ರೀ ಕೆ ಪದ್ಮನಾಭ ಕೊಟ್ಟಾರಿ ಬಿಜೆಪಿಯ ಜಿಲ್ಲಾ ಕಾರ್ಯದರ್ಶಿಗಳಾದ ದಿನೇಶ್ ಅಮ್ಟೂರು ದೇವಪ್ಪ ಪೂಜಾರಿ ಬಂಟ್ವಾಳದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಂಡಲ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸ್ವಾಗತಿಸಿದರು ಕಾರ್ಯಕ್ರಮದ ಲ್ಲಿ ವಂದೇ ಮಾತರಂ ಗೀತೆಯನ್ನು ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಶ್ರೀ ಕಲ್ಲಡ್ಕ ಹಾಡಿದರು ನಿರೂಪಣೆಯನ್ನು ಮಂಡಲದ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು ನಿರ್ವಹಿಸಿದರು.