ಹೈದರಾಬಾದ್: ತೆಲಂಗಾಣದ ಅಪಾರ್ಟ್ಮೆಂಟ್‌ವೊಂದರಲ್ಲಿ ನಾಪತ್ತೆಯಾಗಿದ್ದ 5 ವರ್ಷದ ಬಾಲಕಿ ಶವವಾಗಿ ಪತ್ತೆ ಯಾಗಿರುವ ಘಟನೆ ಕೌಕೂರ್‌ನಲ್ಲಿ (Kowkoor) ನಡೆದಿದೆ. ಇದನ್ನೂ ಓದಿ :ಖ್ಯಾತ ಗಾಯಕಿ ಮೈಸೂರು ನಾಗಮಣಿ ಶ್ರೀನಾಥ್‌ ಅವರಿಗೆ ‘ರಾಜ್ಯ ಸಂಗೀತ ವಿದ್ವಾನ್’ ಪ್ರಶಸ್ತಿ

ಬಾಲಕಿಯನ್ನು ಕೃಷಿ ವಿಜ್ಞಾನಿಯೊಬ್ಬರ ಮಗಳು ಎಂದು ಗುರುತಿಸಲಾಗಿದ್ದು, ಅದೇ ಅಪಾರ್ಟ್ಮೆಂಟ್‌ನಲ್ಲಿ ವಾಸವಾಗಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್ ವಿಕ್ರಮ ಶಂಕಿತ ಆರೋಪಿಯಾಗಿದ್ದು, ಬಾಲಕಿಯನ್ನು ಅಪಹರಿಸಿ ಆಕೆಯ ಬಿಡುಗಡೆಗಾಗಿ 20 ಲಕ್ಷ ರೂ. ಬೇಡಿಕೆ ಇಟ್ಟಿದ್ದಾಗಿ ತಿಳಿದುಬಂದಿದೆ.