ಕಲ್ಲಡ್ಕ : ಜನಜಾತಿಯ ಗರಿಮಾ ಉತ್ಸವ 2026 ಅಂಗವಾಗಿ ಮೂಲ ನಿವಾಸಿಗಳಾದ ಕೊರಗ ಸಮುದಾಯದವರು ಮತ್ತು ಇತರೆ ಪರಿಶಿಷ್ಟ ಪಂಗಡದವರ ಕುಂದುಕೊರತೆ ಅಲಿಕೆ ಕಾರ್ಯಕ್ರಮ ಮೇ 20 ನೇ ಬುಧವಾರ ವೀರಕಂಭ ಗ್ರಾಮದ ಮಜಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರಗಿತು. ಇದನ್ನೂ ಓದಿ : International Tea Day : ಇಂದು ಮೇ 21 ಅಂತಾರಾಷ್ಟ್ರೀಯ ಚಹಾ ದಿನ
ಮೂಲ ನಿವಾಸಿಗಳಾದ ಕೊರಗ ಸಮುದಾಯದವರು ಮತ್ತು ಇತರೆ ಪರಿಶಿಷ್ಟ ಪಂಗಡದವರಿಗೆ ಸಾಮಾಜಿಕ ಭದ್ರತೆ ಯೋಜನೆಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳ ವಿವಿಧ ಯೋಜನೆಗಳ ಪ್ರಯೋಜನಗಳ ಕುರಿತು ಅರಿವು ಮೂಡಿಸುವ ಸಭೆ ಯಾಗಿದ್ದು
ಸದರಿ ಸಭೆಯ ಜೊತೆಗೆ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನೂ ಸ್ಥಳದಲ್ಲಿ ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಯ ಸಹಾಯಕ ನಿರ್ದೇಶಕರಾದ ವಿನಯ ಕುಮಾರಿ ಕೆ. ಬಿ ಬಂಟ್ವಾಳ ತಾಲೂಕು, ಆರೋಗ್ಯ ಇಲಾಖೆಯ ತಾಲೂಕು ಅರೋಗ್ಯ ವೈದ್ಯಾಧಿಕಾರಿ ಅಶೋಕ್ ರೈ, ಶಿಕ್ಷಣ ಇಲಾಖೆ ಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ,ವೀರಕಂಬ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಂಭು ಕುಮಾರ ಶರ್ಮಾ,ತಾಲೂಕು ಆಹಾರ ನಿರೀಕ್ಷಕರಾದ ಪ್ರಶಾಂತ್ ಶೆಟ್ಟಿ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯ ಮೇಲ್ವಿಚಾರಕಕಿ ರೂಪಕಲಾ , ಬಂಟ್ವಾಳ ತಾಲೂಕು ಪಂಚಾಯತ್ ಮ್ಯಾನೇಜರ್ ಪ್ರಕಾಶ್,ವೀರಕಂಭ ಗ್ರಾಮ ಆಡಳಿತ ಅಧಿಕಾರಿ ವೈಶಾಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಇಲಾಖೆಗಳಿಂದ ಕೊರಗ ಸಮುದಾಯ ಮತ್ತು ಪರಿಶಿಷ್ಟ ಪಂಗಡದವರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಾಮ ವ್ಯಾಪ್ತಿಯ ಆರೋಗ್ಯ ಸುರಕ್ಷಣಾಧಿಕಾರಿ, ಆಶಾ ಕಾರ್ಯಕರ್ತೆಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವೀರಕಂಬ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಕೊರಗ ಸಮುದಾಯದ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.
