ಟೆಹ್ರಾನ್‌/ವಾಷಿಂಗ್ಟನ್‌: ಟೆಹ್ರಾನ್‌ ಮೇಲೆ ನಡೆಸಿದ ಬೃಹತ್‌ ದಾಳಿಯಲ್ಲಿ (Massive Strike) ಇರಾನಿನ ಮಿಲಿಟರಿ ಪಡೆಯ ಉನ್ನತ ಕಮಾಂಡರ್‌ಗಳನ್ನ ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ದಂತ ಭಾಗ್ಯ ಯೋಜನೆ : ಹಿರಿಯರ ಮೊಗದಲ್ಲಿ ಮಂದಹಾಸದೊಂದಿಗೆ ಆತ್ಮವಿಶ್ವಾಸ ಮೂಡಿಸೋಣ

ಈ ಕುರಿತು ತಮ್ಮ ಟ್ರೂತ್‌ ಸೋಷಿಯಲ್‌ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ವಿಡಿಯೋವೊಂದನ್ನ ಹಂಚಿಕೊಂಡಿರುವ ಟ್ರಂಪ್‌, ಇರಾನ್‌ನ ಹಲವು ಉನ್ನತ ಕಮಾಂಡರ್‌ಗಳನ್ನ ನಿರ್ಮೂಲನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

ತನ್ನ ಪಡೆಯನ್ನ ಅವಿವೇಕತನದಿಂದ ಮತ್ತು ಕಳಪೆಯಾಗಿ ಮುನ್ನಡೆಸಿದ ಇರಾನ್‌ನ ಮಿಲಿಟರಿ ಪಡೆಯ ಉನ್ನತ ನಾಯಕರನ್ನ (Irans Military Top Commanders) ನಿರ್ಮೂಲನೆ ಮಾಡಿದ್ದೇವೆ ಎಂದು ಬರೆಯುತ್ತಾ ವಿಡಿಯೋವೊಂದನ್ನ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋನಲ್ಲಿ ವಿಮಾನಗಳ ಭಾರೀ ಶಬ್ಧಗಳು ಮತ್ತು ಗಮನಾರ್ಹ ಸ್ಫೋಟಗಳು ಕಂಡುಬಂದಿವೆ. ಆದ್ರೆ ಹತ್ಯೆಯಾದ ಟಾಪ್‌ ಕಮಾಂಡರ್‌ಗಳ ಪಟ್ಟಿಯನ್ನು ಶ್ವೇತಭವನ ಇನ್ನೂ ಬಿಡುಗಡೆ ಮಾಡಿಲ್ಲ. ಇರಾನ್‌ ಕೂಡ ತನ್ನ ಕಮಾಂಡರ್‌ಗಳ ಸಾವನ್ನ ದೃಢಪಡಿಸಿಲ್ಲ.

ಹಾರ್ಮುಜ್‌ ಜಲಸಂಧಿ ತೆರೆಯಲು 48 ಗಂಟೆ ಡೆಡ್‌ಲೈನ್‌
ಮಧ್ಯಪ್ರಾಚ್ಯದ ಭೀಕರ ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಲೇ ಇದೆ. ಇದರ ಬೆನ್ನಲ್ಲೇ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಡೆಡ್‌ಲೈನ್‌ವೊಂದನ್ನು ನೀಡಿದ್ದಾರೆ. ಹಾರ್ಮುಜ್ ಜಲಸಂಧಿ (Strait of Hormuz) ತೆರೆಯಲು 48 ಗಂಟೆಗಳ ಗಡುವು ನೀಡಿದ್ದಾರೆ.

ಏಪ್ರಿಲ್ 6ರ ಸೋಮವಾರ ರಾತ್ರಿ 8 ಗಂಟೆವರೆಗೂ ಟ್ರಂಪ್ ಡೆಡ್‌ಲೈನ್ ನೀಡಿದ್ದಾರೆ. ಒಪ್ಪಂದಕ್ಕೆ ಬನ್ನಿ ಇಲ್ಲವೇ ಹಾರ್ಮುಜ್ ತೆರೆಯಿರಿ. ಒಂದು ವೇಳೆ ಹಾರ್ಮುಜ್ ತೆರೆಯದಿದ್ದರೆ ಇರಾನ್‌ಗೆ ನರಕ ದರ್ಶನ ಕಟ್ಟಿಟ್ಟ ಬುತ್ತಿ ಎಂದು ಇರಾನ್‌ಗೆ ಡೆಡ್‌ಲೈನ್ ಸಹಿತ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದಾರೆ.