ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಏ. 10ರ ವರೆಗೆ ತರಗತಿಗಳು ಇವೆ. ಪಾಸ್ ಅವಧಿ ಮಾರ್ಚ್ 31ಕ್ಕೆ ಕೊನೆಗೊಂಡಿದೆ. 10 ದಿನ ಹಣ ಪಾವತಿಸಿ, ಬಸ್ಗಳಲ್ಲಿ ಸಂಚರಿಸುವುದು ಕಷ್ಟಸಾಧ್ಯ. ಹೀಗಾಗಿ ಸಾರಿಗೆ ನಿಗಮವು ಒಂದನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಅದೇ ಪಾಸ್ ತೋರಿಸಿ ಹತ್ತು ದಿನ ಸಂಚರಿಸಲು ಅವಕಾಶ ಕಲ್ಪಿಸಿದೆ.