ನವದೆಹಲಿ: ನಾಳೆಯಿಂದ ದೇಶದ ಆರ್ಥಿಕ ವರ್ಷ 2026-27 ಆರಂಭವಾಗಲಿದೆ. ಹಣಕಾಸು, ಬ್ಯಾಂಕಿಂಗ್, ಸಾರಿಗೆ, ತೆರಿಗೆ ಸೇರಿದಂತೆ ಹಲವು ಬದಲಾಗಲಿದ್ದು ನಾಳೆಯಿಂದ ನಗದು (Cash) ವ್ಯವಹಾರ ಮತ್ತಷ್ಟು ದುಬಾರಿಯಾಗಲಿದೆ.

ಆದಾಯ ತೆರಿಗೆ ಕಾಯ್ದೆ (Income Tax Act) ಅಡಿ ಹೊಸ ನಿಯಮಗಳು ಜಾರಿ ಆಗಲಿದೆ. ನಗದು ಡೆಪಾಸಿಟಿಗೂ ಮಿತಿ, ನಗದು ವಾಪಸ್‌ಗೂ ಮಿತಿ ಇರಲಿದ್ದು, ನಗದು ವ್ಯವಹಾರಕ್ಕೆ ಹೊಸ ಮಿತಿ ನಿಗದಿಗೊಳಿಸಲಾಗಿದೆ. ಬೇಕಾಬಿಟ್ಟಿ ನಗದು ವ್ಯವಹಾರಕ್ಕೆ ಬ್ರೇಕ್ ಹಾಕಿ, ಪಾರದರ್ಶಕತೆ ತರಲು ಕೇಂದ್ರ ಸರ್ಕಾರ ಹಲವು ಬದಲಾವಣೆಗಳನ್ನು ತಂದಿದ್ದು, ಜನರ ಮೇಲೆ ಹಲವು ಪರಿಣಾಮ ಬೀರಲಿದೆ. ನಗದು ವ್ಯವಹಾರ ಮಾಡುವಾಗ ಎಚ್ಚರವಹಿಸಬೇಕಿದ್ದು ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಕಟ್ಟಬೇಕಾಗುತ್ತದೆ.

ನಗದು ವ್ಯವಹಾರ ಹೇಗೆ?
* ಒಬ್ಬ ವ್ಯಕ್ತಿಯಿಂದ ಒಂದೇ ದಿನದಲ್ಲಿ 2 ಲಕ್ಷ ರೂ.ಗಿಂತ ಹೆಚ್ಚು ಕ್ಯಾಶ್ ಪಡೆಯುವಂತಿಲ್ಲ. ವಾಪಾರಸ್ಥರು 2 ಲಕ್ಷ ರೂ.ಗಿಂತ ಹೆಚ್ಚು ಹಣ ಪಡೆದರೆ ಹಣದ ಮೇಲೆ 100% ದಂಡ ಹಾಕಲಾಗುತ್ತದೆ.

*ಆಸ್ತಿ ಖರೀದಿ ವೇಳೆ 20 ಸಾವಿರ ರೂ.ಗಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ . ನಿಯಮ ಉಲ್ಲಂಘಿಸಿದ್ರೆ 100% ದಂಡ ವಿಧಿಸಬಹುದು.
* ಕೈಸಾಲ ಕೂಡ 20 ಸಾವಿರ ರೂ. ಗಿಂತ ಜಾಸ್ತಿ ನಗದು ರೂಪದಲ್ಲಿ ತೆಗೆದುಕೊಳ್ಳಬಾರದು . (ಮಿತಿಗಿಂತ ಹೆಚ್ಚು ಸಾಲ, ವಾಪಸಾತಿಗೂ 100% ಪೆನಾಲ್ಟಿ ಹಾಕಲಾಗುತ್ತದೆ.

* 20 ಸಾವಿರ ರೂ. ಗಿಂತ ಜಾಸ್ತಿ ನಗದು ರೂಪದಲ್ಲಿ ಸೆಕ್ಯುರಿಟಿ ಡೆಪಾಸಿಟ್ ತೆಗೆದುಕೊಂಡರೆ 100% ದಂಡ. ಮನೆ, ಕಚೇರಿ ಬಾಡಿಗೆಗೆ ಕೊಡುವಾಗ ಅನ್ವಯವಾಗುತ್ತದೆ.

* ಸೆಕ್ಯುರಿಟಿ ಡೆಪಾಸಿಟ್ 20 ಸಾವಿರ ರೂ.ಗಿಂತ ಹೆಚ್ಚು ನಗದು ರೂಪದಲ್ಲಿ ವಾಪಸ್ ನೀಡಿದರೆ 100% ದಂಡ. ಬಾಡಿಗೆದಾರರು ಮನೆ ಖಾಲಿ ಮಾಡುವಾಗ ಅನ್ವಯವಾಗುತ್ತದೆ.

ಹೋಟೆಲ್‌ಗೆ ನಿಯಮ ಏನು?
ಹೋಟೆಲ್‌ನಲ್ಲಿ 1 ಲಕ್ಷ ರೂ.ಗಿಂತ ಹೆಚ್ಚಿನ ಬಿಲ್‌ಗೆ ಪ್ಯಾನ್ ಕಡ್ಡಾಯ. 50 ಸಾವಿರ ರೂ. ವಹಿವಾಟು ಪ್ಯಾನ್ ಕಡ್ಡಾಯ ಮಿತಿ 1 ಲಕ್ಷಕಕ್ಕೆ ಏರಿಸಲಾಗಿದೆ.

ಕ್ಯಾಶ್ ಡೆಪಾಸಿಟ್‌ಗೆ ಮಿತಿ ಹೇಗೆ?
* ಉಳಿತಾಯ ಖಾತೆಗೆ ವರ್ಷಕ್ಕೆ ಡೆಪಾಸಿಟ್ ಗರಿಷ್ಠ ಮಿತಿ 10 ಲಕ್ಷ (ಪ್ಯಾನ್‌ಕಾರ್ಡ್ ಇದ್ದವರಿಗೆ ಅನ್ವಯ)
*ಉಳಿತಾಯ ಖಾತೆಗೆ ವರ್ಷಕ್ಕೆ ಡೆಪಾಸಿಟ್ ಗರಿಷ್ಠ ಮಿತಿ 5 ಲಕ್ಷ (ಪ್ಯಾನ್‌ಕಾರ್ಡ್ ಇಲ್ಲದವರಿಗೆ ಅನ್ವಯ)
* ಕರೆಂಟ್ (ಚಾಲ್ತಿ) ಅಕೌಂಟ್‌ಗೆ ವರ್ಷಕ್ಕೆ ಡೆಪಾಸಿಟ್ ಗರಿಷ್ಠ ಮಿತಿ 50 ರೂ. ಲಕ್ಷ
*ಗರಿಷ್ಠ ಮಿತಿಗಿಂತ ಹೆಚ್ಚು ಹಣ ಡೆಪಾಸಿಟ್ ಮಾಡಿದರೆ ಸ್ಪಷ್ಟನೆ ಕಡ್ಡಾಯ
* ಬ್ಯಾಂಕ್‌ಗಳಿಂದ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ಕೊಡಬೇಕು
*ಮಿತಿಗಿಂತ ಹೆಚ್ಚು ನಗದು ಪಾವತಿಸಿದ್ದಲ್ಲಿ ಐಟಿಗೆ ಸ್ಪಷ್ಟನೆ ಕೊಡಬೇಕು
* ಐಟಿಗೆ ಸ್ಪಷ್ಟನೆ ನೀಡದಿದ್ರೆ 84% ದಂಡ, ತೆರಿಗೆ ವಿಧಿಸಬಹುದು.

ಹಣ ವಿತ್‌ಡ್ರಾ ಮಿತಿ ಬದಲಾವಣೆ ಹೇಗೆ?
* ಹಣ ವಿತ್ ಡ್ರಾ ಮಿತಿ ವರ್ಷಕ್ಕೆ ಗರಿಷ್ಠ 20 ಲಕ್ಷ (ಐಟಿಆರ್ ರಿಟನ್ಸ್ ಮಾಡದಿದ್ದವರಿಗೆ ಅನ್ವಯ)
* 20 ಲಕ್ಷಕ್ಕಿಂತ ಹೆಚ್ಚು ವಿತ್ ಡ್ರಾ ಮಾಡಿದ್ರೆ 2% ಟಿಡಿಎಸ್ ಕಟ್
* 1 ಕೋಟಿಗಿಂತ ಹೆಚ್ಚು ವಿತ್ ಡ್ರಾ ಮಾಡಿದ್ರೆ 5% ಟಿಡಿಎಸ್ ಕಟ್
* ಕ್ರೆಡಿಟ್ ಕಾರ್ಡ್ ಪಡೆಯಲು, ನವೀಕರಿಸಲು ಪ್ಯಾನ್ ಕಡ್ಡಾಯ
* ಯುಪಿಐ ವಿತ್ ಡ್ರಾ ಮಾಡಿದ್ರೆ 23 ರೂಪಾಯಿ ಶುಲ್ಕ
* ಎಟಿಎಂ ವಿತ್ ಡ್ರಾ ಮಿತಿ ಮೀರಿದ್ರೆ 25 ರೂ. ಶುಲ್ಕ ಕಟ್ಟಬೇಕು