ಬಂಟ್ವಾಳ : ನಿಶಾನಿ ಡ್ಯಾನ್ಸ್ ಗ್ರೂಪ್ ನರಿಕೊಂಬು ಇದರ ನೂತನ ನೃತ್ಯ ಕಲಿಕಾ ಸಂಸ್ಥೆ ನಿಶಾನಿ ಡ್ಯಾನ್ಸ್ ಅಕಾಡೆಮಿಯು ಎಲ್ ಕೆ ಕಾಂಪ್ಲೆಕ್ಸ್, ಮೊಗರ್ನಾಡ್ ಇಲ್ಲಿ ಮಾರ್ಚ್ 29 ರಂದು ಪ್ರಾರಂಭಿಸಲಾಯಿತು. ಇದನ್ನೂ ಓದಿ : ನರಿಕೊಂಬು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ಮಕ್ಕಳ ಪದಗ್ರಹಣ ಕಾರ್ಯಕ್ರಮ
ಜನಾರ್ಧನ ವಾಸುದೇವ ಭಟ್ಟ, ಮೊಕ್ತೇಸರರು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಮೊಗಾರ್ನಾಡು ರವರು ದೀಪ ಪ್ರಜ್ವಲನೆ ಮಾಡಿ ನೃತ್ಯ ತರಗತಿಯನ್ನು ಪ್ರಾರಂಭಿಸಿದರು.
ಈ ಸಂದರ್ಭದಲ್ಲಿ ಜಗನ್ನಾಥ ಬಂಗೇರ ನಿರ್ಮಲ್, ನಿಶಾನಿ ಡಾನ್ಸ್ ಗ್ರೂಪ್ ನ ವ್ಯವಸ್ಥಾಪಕ ದಿನೇಶ್ ಅಮೀನ್, ನೃತ್ಯ ಸಂಯೋಜಕಿ ಕುಮಾರಿ ನಿಶಾನಿ, ವಾರ್ಷಿಕೋತ್ಸವ ಸಮಿತಿಯ ಅಧ್ಯಕ್ಷರಾದ ಯತೀಶ್ ಶೆಟ್ಟಿ ಹೊಸಲಚ್ಚಿಲು, ನೃತ್ಯ ಕಲಿಕಾ ಕಲಾವಿದರು, ಪೋಷಕರು ಉಪಸ್ಥಿತರಿದ್ದರು.
ಉದಯ್ ಕುಮಾರ್ ಶೆಟ್ಟಿ ಹೊಸಲಚ್ಚಿಲು ಕಾರ್ಯಕ್ರಮ ನಿರೂಪಿಸಿದರು.
