ಬಂಟ್ವಾಳ ತಾಲೂಕು ನರಿಕೊಂಬು, ಗೋಳ್ತಮಜಲು, ಬಾಳ್ತಿಲ ಗ್ರಾಮ ಪಂಚಾಯತ್ ಗಳನ್ನು ಒಳಗೊಂಡ ನರಿಕೊಂಬು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಜಂಟಿ ಸಲಹ ಸಮಿತಿ ಸಭೆ ಜ.18ರಂದು ನರಿಕೊಂಬು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಜಂಟಿ ಸಲಹ ಸಮಿತಿಯ ಅಧ್ಯಕ್ಷರಾಗಿ ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಸಂತೋಷ ಕುಮಾರ್ ಆಯ್ಕೆಯಾಗಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಸಭೆಯಲ್ಲಿ 3 ಗ್ರಾಮ ಪಂಚಾಯತ್ ಗಳ ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು ಹಾಗೂ ಸಮಸ್ಯೆಗಳಿಗೆ ಪರಿಹಾರೊಪಾಯಗಳ ಬಗ್ಗೆ, ಬೇಸಿಗೆ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳಿಗೆ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚಿಸಲಾಯಿತು,

ಈ ಸಂದರ್ಭದಲ್ಲಿ ಬಹುಗ್ರಾಮ ಸಮಿತಿಯ ಉಪಾಧ್ಯಕ್ಷರಾದ ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಅಣ್ಣು ಪೂಜಾರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎ. ಇ. ಇ. ಜೆ ಕೆ ನಾಯಕ್ , ಗೊಳ್ತಮಜಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೇಮ, ಉಪಾಧ್ಯಕ್ಷ ಜಯಂತ್ ಮಕ್ಕರೂ , ನರಿಕೊಂಬು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಮೋಹಿನಿ ವಾಮನ, ನರಿಕೊಂಬು ಪಂಚಾಯತ್ ಅಭಿವೃದ್ಧಿ ಹರೀಶ್, ಗೋಳ್ತಮಜಲು ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಜಯ ಶಂಕರ್ ಅಲ್ವಾ, ಇಂಜಿನಿಯರ್ ಜಗದೀಶ್, ಮೆಸ್ಕಂ ಇಲಾಖಾ ಸಿಬಂದಿ, ರಾಷ್ಟ್ರೀಯ ಹೆದ್ದಾರಿ ಇಲಾಖಾ ಸಿಬ್ಬಂದಿ ಗಳು , ಪಂಪು ಚಾಲಕರು ಉಪಸ್ಥಿತರಿದ್ದರು.