ಕೂಚ್ ಬೆಹಾರ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ 404 ರನ್ ಗಳಿಸಿ ದಾಖಲೆ ಬರೆದಿರುವ ಕರ್ನಾಟಕದ ಪ್ರತಿಭಾವಂತ ಯುವ ಆಟಗಾರ ಪ್ರಖರ್ ಚತುರ್ವೇದಿ ಅವರನ್ನು ಸಿ.ಎಂ.ಸಿದ್ಧರಾಮಯ್ಯ ಅವರು ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭೇಟಿಯಾಗಿ ಅಭಿನಂದಿಸಿದರು.
ಅಗಾಧ ಪ್ರತಿಭೆ, ಅದ್ಭುತ ಆಟದ ಮೂಲಕ ನಾಡಿನ ಮನೆಮಾತಾಗಿರುವ ಈ ಯುವಕನ ಕ್ರೀಡಾ ಬದುಕು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸಿದರು.