ಯೆನೆಪೋಯ ವಿಶ್ವವಿದ್ಯಾನಿಲಯವು ದತ್ತೋಪಂತ್ ಥೇಂಗಡಿ ರಾಷ್ಟ್ರೀಯ ಕಾರ್ಮಿಕರ ಶಿಕ್ಷಣ ಮತ್ತು ಅಭಿವೃದ್ಧಿ ಮಂಡಳಿ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಭಾರತ ಸರ್ಕಾರದ ಸಹಯೋಗದೊಂದಿಗೆ ಜ.18ರಂದು ವಿಶ್ವವಿದ್ಯಾನಿಲಯದ ಸಿಬ್ಬಂದಿಗಳಿಗೆ ಸ್ವಯಂ ಉದ್ಯೋಗದ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದರು.
ಮಂಗಳೂರು ಪ್ರಾದೇಶಿಕ ನಿರ್ದೇಶನಾಲಯದ ಶಿಕ್ಷಣಾಧಿಕಾರಿ ಸುಮೇಶ್ ಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾದ ಜೆಸಿಐ ಇಂಡಿಯಾದ ವಲಯ ತರಬೇತುದಾರರಾದ ಪೀಟರ್ ಅಂತೋನಿ ಪಿಂಟೋ ಅವರು ಮಾತನಾಡಿ ಸ್ವಯಂ ಉದ್ಯೋಗ ಮತ್ತು ಆರ್ಥಿಕ ನಿರ್ವಹಣೆಯ ಮಹತ್ವವನ್ನು ತಿಳಿ ಹೇಳಿದರು.
ಶ್ರೀಮತಿ ಹರಿನಾ ಜೆ. ರಾವ್ ಮತ್ತು ಶ್ರೀಮತಿ ರೇಖಲತಾ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಿದರು, ಕ್ಯಾಂಡಲ್ ತಯಾರಿಕೆ, ಲಿಕ್ವಿಡ್, ಸೋಪ್ ಮತ್ತು ಫಿನೈಲ್ ಬಗ್ಗೆ ತರಬೇತಿ ನೀಡಿದರು.
ವಿಶ್ವವಿದ್ಯಾನಿಲಯದ ಪರಿಸರ ಅಧ್ಯಯನ ಕೇಂದ್ರವು ಭಾಗವಹಿಸುವವರಿಗೆ ಎರೆಗೊಬ್ಬರ ಕುರಿತು ತರಬೇತಿಯನ್ನು ಆಯೋಜಿಸಿತ್ತು. ಶ್ರೀ ವಿನಾಯಕ ಭಟ್ಟರು ಕಾರ್ಯಕ್ರಮವನ್ನು
ನಿರೂಪಿಸಿದರು, ಉಪನಿರ್ದೇಶಕಿ ಡಾ. ಭಾಗ್ಯ ಬಿ.ಶರ್ಮಾ ತರಬೇತಿಯನ್ನು ಆಯೋಜಿಸಿದರು.