ಕಲ್ಲಡ್ಕ ಶ್ರೀರಾಮ ಹಿ.ಪ್ರಾ.ಶಾಲೆಯ ೬ನೇ ತರಗತಿ ವಿದ್ಯಾರ್ಥಿನಿ ಭೂಮಿಕಾ ಡಿ.೭ರಂದು ರಂದು ಉತ್ತರಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ರಾಷ್ಟ್ರಮಟ್ಟದ ಗಣಿತ ಮೇಳದಲ್ಲಿ “ಸಮ ಬಹುಭುಜಾಕೃತಿಗಳ ಗುಣಧರ್ಮಗಳ ಆಧಾರಿತ ಪ್ರದರ್ಶನ” ಎಂಬ ಗಣಿತ ಮಾದರಿ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು.
ಕುರ್ಮಾನ್ ಮೋಹನ್ ಭಂಡಾರಿ ಹಾಗೂ ಇಂದಿರಾ ದಂಪತಿಯ ಪುತ್ರಿ.
ಮೊದಲ ಬಾರಿಗೆ ಗಣಿತ ಕ್ಷೇತ್ರದಲ್ಲಿ ರಾಷ್ಟçಮಟ್ಟದಲ್ಲಿ ಸಾಧನೆ ಮಾಡಿ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಇವರಿಗೆ ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು, ಸಂಚಾಲಕರು, ಮುಖ್ಯಶಿಕ್ಷಕರು, ಬೋಧಕರು ಹಾಗೂ ಬೋಧಕೇತರರು ಅಭಿನಂಧಿಸಿದರು.