ಭಾರತೀಯರ ಅಡುಗೆಯಲ್ಲಿ ಕರಿಬೇವಿನ ಎಲೆಯ ಬಳಕೆ ತಲತಲಾಂತರಗಳಿಂದ ಬಂದಿದೆ. ಅಡುಗೆ ಮನೆಯಲ್ಲಿ ಕರಿ ಬೇವಿನ ಎಲೆ ಇಲ್ಲದೇ ಇರುವುದಿಲ್ಲ. ಇದರ ಎಲೆಗಳು ಔಷಧೀಯ ಗುಣಗಳನ್ನು ಹೊಂದಿದೆ. ಹಾಗಾಗಿ ಇದನ್ನು ಆಹಾರದಲ್ಲಿ ಹೆಚ್ಚು ಬಳಸಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚು ಮಾಡುತ್ತದೆ. ಇದರಲ್ಲಿ ಹೆಚ್ಚು ಆರೋಗ್ಯಕರ ಪ್ರಯೋಜಗಳಿವೆ.
ಮಸಾಲೆ ಪದಾರ್ಥಗಳಲ್ಲಿ ಬಳಸುವ ಎಲೆಗಳನ್ನು ಸಾಮಾನ್ಯವಾಗಿ “ಕರಿಬೇವಿನ ಎಲೆಗಳು” ಎನ್ನಲಾಗುತ್ತದೆ, ಆದರೆ ಇವುಗಳಿಗೆ “ಸಿಹಿ ಬೇವಿನ ಎಲೆಗಳು” ಎಂತಲೂ ಕರೆಯಲಾಗುತ್ತದೆ. ದಕ್ಷಿಣ ಭಾರತದಲ್ಲಿ ಇದು ಮಸಾಲೆ ಪದಾರ್ಥಗಳಲ್ಲಿ ಬಳಸಲಾಗುವ ಅವಿಭಾಜ್ಯ ಘಟಕವಾಗಿದ್ದು, ಅಲ್ಲಿ ಕರಿಬೇವಿನ ಎಲೆಗಳಿಲ್ಲದೇ ಮಸಾಲೆ ಪದಾರ್ಥವು ರುಚಿಹೀನ ಎಂದು ಭಾವಿಸಲಾಗುತ್ತದೆ. ಎಲೆಯ ನೋಟವು ಕಹಿಯಾದ ಬೇವಿನ ಮರದ ಎಲೆಗಳ ಹಾಗೆ ಇರುವುದರಿಂದ ಕನ್ನಡದಲ್ಲಿ ಇದನ್ನು “ಕರಿ ಬೇವು” ಎಂದು ಕರೆಯಲಾಗುತ್ತದೆ
ಕರಿಬೇವು ಎಲೆಯ ಆರೋಗ್ಯ ಪ್ರಯೋಜನಗಳು
* ಕೂದಲು ಆರೋಗ್ಯಪೂರ್ಣವಾಗಿ ಮತ್ತು ಸೊಂಪಾಗಿ ಬೆಳೆಯುವಲ್ಲಿ ಕರಿಬೇವಿನ ಎಲೆಗಳು ಸಹಾಯಕಾರಿ ಎಂಬುದಾಗಿಯೂ ಕಂಡುಬಂದಿದೆ. ಈ ಎಲೆಯು ಅಧಿಕ ಕಬ್ಬಿಣದ ಅಂಶವನ್ನು ಒಳಗೊಂಡಿದೆ.
* ಹೊಟ್ಟೆಗೆ ಸಂಬಂಧಿಸಿದ ತೊಂದರೆಗಳಾದ ಅಜೀರ್ಣ, ವಾಕರಿಕೆಗೆ ಮುಕ್ತಿ ನೀಡುತ್ತದೆ.
* ಕರಿಬೇವಿನ ಸಾರವು ನರಮಂಡಲ, ಹೃದಯ, ಮೆದುಳು ಮತ್ತು ಮೂತ್ರಕೋಶಗಳ ಆರೋಗ್ಯವನ್ನು ಸಹ ಕಾಪಾಡುತ್ತದೆ.
* ಕರಿಬೇವಿನ ಎಲೆಗಳು ಆಲ್ಝೈಮರ್ ಕಾಯಿಲೆಗಳಿಗೆ ಪರಿಹಾರ ನೀಡುತ್ತದೆ.
* ಕರಿಬೇವಿನ ಎಲೆ ಬ್ಯಾಕ್ಟೀರಿಯಾದಿಂದ ದೇಹವನ್ನು ಸಂರಕ್ಷಿಸುತ್ತದೆ.
* ದೇಹದ ತೂಕವನ್ನು ಕಡಿಮೆಗೊಳಿಸುವಲ್ಲಿ ಕರಿ ಬೇವಿನ ಎಲೆ ಬಹಳ ಉಪಯುಕ್ತವಾಗುತ್ತದೆ.
ಬ್ಯೂಟಿ ಟಿಪ್ಸ್
* ಕರಿ ಬೇವಿನ ಎಲೆಗಳನ್ನು ಚನ್ನಾಗಿ ಬಿಸಿಲಿನಲ್ಲಿ ಒಣಗಿಸಿ, ನಂತರ ಅದನ್ನು ಕೊಬ್ಬರಿ ಎಣ್ಣೆಯಲ್ಲಿ ಹಾಕಿ ಕುದಿಸಿ, ಆ ಎಣ್ಣೆಯನ್ನು ಕೂದಲಿಗೆ ನಿಯಮಿತವಾಗಿ ಹಚ್ಚುವುದರಿಂದ ಕೂದಲಿನ ಹಲವು ಸಮಸ್ಯೆಗಳಾದ ಕೂದಲು ಉದುರುವುದು, ತಲೆಹೊಟ್ಟು ಹಾಗೂ ಒಣ ಕೂದಲಿನ ಸಮಸ್ಯೆಗೆ ಮುಕ್ತಿ ಸಿಗುತ್ತದೆ.
* ಕರಿಬೇವಿನ ಎಲೆಗಳನ್ನು ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಕುದಿಸಿ ಕೂಲಿಗೆ ಹಚ್ಚುವುದು ಹಾನಿಗೊಳಾಗಾದ ಕೂದಲನ್ನು ಸರಿ ಪಡಿಸಲು ಸಹಾಯ ಮಾಡುತ್ತದೆ. ಕರಿಬೇವಿನ ಎಣ್ಣೆಯು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ. ಡ್ಯಾಂಡ್ರಫ್, ಸೋರಿಯಾಸಿಸ್ ಸಮಸ್ಯೆಗಳಿಗೆ ಮುಕ್ತಿ ನೀಡುತ್ತದೆ.
ಕರಿಬೇವಿನ ಎಲೆ ಮತ್ತು ಮೊಸರಿನ ಹೇರ್ ಮಾಸ್ಕ್
ಒಂದು ಬಟ್ಟಲಿನಲ್ಲಿ, 1/4 ಕಪ್ ಕರಿಬೇವಿನ ಎಲೆಗಳನ್ನು 1/2 ಕಪ್ ಮೊಸರನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ನಂತರ ಅದನ್ನು ಕೂದಲು ಮತ್ತು ನೆತ್ತಿಗೆ ಹಚ್ಚಿ ಮತ್ತು 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ವಾರಕ್ಕೆ ಎರಡು ಅಥವಾ ಮೂರು ಬಾರಿ ಈ ಹೇರ್ ಪ್ಯಾಕ್ ಬಳಸುವುದು ನಿಮ್ಮ ನೆತ್ತಿಯ ಆರೋಗ್ಯವನ್ನು ಕಾಪಾಡುತ್ತದೆ ಹಾಗೂ ಕೂದಲು ಉದುರುವುದನ್ನ ತಡೆಯುತ್ತದೆ.
ಇದು ಸು. 20′ ಎತ್ತರಕ್ಕೆ ಬೆಳೆಯುವ ಬಹುವಾರ್ಷಿಕ ಮರ. ಇದರ ತೊಗಟೆ ಕಗ್ಗಂದು ಅಥವಾ ಕಪ್ಪು ಬಣ್ಣದ್ದು. ಎಲೆಗಳು ಪರ್ಯಾಯವಾಗಿ ಜೋಡಣೆಗೊಂಡಿದ್ದು ಗರಿರೂಪದ ಸಂಯುಕ್ತ ಮಾದರಿಯವಾಗಿವೆ. ಒಂದೊಂದು ಎಲೆಯಲ್ಲೂ ಸು. 9-25 ಕಿರುಎಲೆಗಳಿವೆ (ಪರ್ಣಿಕೆ). ಇವನ್ನು ಬೆಳಕಿಗೆ ಎದುರಾಗಿ ಹಿಡಿದು ಪರೀಕ್ಷಿಸಿದರೆ ಅವುಗಳ ಅಲಗಿನ ಮೇಲೆಲ್ಲ ಸೂಕ್ಷ್ಮವಾದ ಚುಕ್ಕೆಗಳಂಥ ರಸಗ್ರಂಥಿಗಳನ್ನು ನೋಡಬಹುದು. ಈ ಗ್ರಂಥಿಗಳಲ್ಲಿ ಒಂದು ವಿಶಿಷ್ಟಬಗೆಯ ಚಂಚಲತೈಲವಿದೆ. ಇದರಿಂದಾಗಿ ಎಲೆಗಳು ಗಂಧಯುಕ್ತವಾಗಿವೆ.
ಕರಿಬೇವು ತನ್ನ ಸುಗಂಧಪೂರಿತ ಎಲೆಗಳಿಂದಾಗಿ ಬಹು ಪ್ರಾಮುಖ್ಯ ಪಡೆದಿದೆ. ಎಲೆಗಳನ್ನು ಹಲವಾರು ಬಗೆಯ ಅಡಿಗೆಯ ಕೆಲಸಗಳಲ್ಲಿ ಉಪಯೋಗಿಸುವುದು ಎಲ್ಲರಿಗೂ ತಿಳಿದದ್ದೇ. ಎಲೆಗಳ ರಾಸಾಯನಿಕ ಸಂಯೋಜನೆ ಈ ರೀತಿ ಇದೆ: ತೇವಾಂಶ 66.3%; ಪ್ರೋಟೀನು 6.1%; ಕೊಬ್ಬು 1.0%; ಸಕ್ಕರೆ-ಪಿಷ್ಟದ ಅಂಶ 16.0%; ನಾರಿನ ಅಂಶ 6.4%; ಲವಣಾಂಶ 4.2%; ಹಾಗೂ ಪ್ರತಿ 100 ಗ್ರಾಂ. ಎಲೆಗಳಲ್ಲಿ 810 ಮಿಗ್ರಾಂ. ಕ್ಯಾಲ್ಸಿಯಂ, 600 ಮಿಗ್ರಾಂ. ರಂಜಕ. 3.1 ಮಿಗ್ರಾಂ. ಕಬ್ಬಿಣ, 12,600 ಐ. ಯು ಕ್ಯಾರೋಟೀನ್ (ಎ ಜೀವಾತು ರೂಪದಲ್ಲಿ), 4 ಮಿಗ್ರಾಂ, ಸಿ ಜೀವಾತು. ಇವಲ್ಲದೆ ಹಲವಾರು ಬಗೆಯ ಅಮೈನೋ ಅಮ್ಲಗಳೂ ಇವೆ.
ಉಪಯೋಗಗಳು
ಆಗ ತಾನೇ ಕೊಯ್ದ ಎಲೆಗಳನ್ನು ಅಸವೀಕರಣಗೊಳಿಸಿ (ಆವಿ ಬಟ್ಟಿಯಿಳಿಸುವಿಕೆ) ಒಂದು ಬಗೆಯ ಚಂಚಲ ತೈಲವನ್ನು ತೆಗೆಯಬಹುದು. ಶುದ್ಧಗೊಳಿಸಿದ ಈ ಎಣ್ಣೆ ಹಳದಿ ಬಣ್ಣದ್ದೂ ಸಂಬಾರದ ವಾಸನೆಯುಳ್ಳದ್ದೂ ಲವಂಗದ ಕಟುರುಚಿಯುಳ್ಳದ್ದೂ ಅಗಿದೆ. ಇದನ್ನು ಕೆಲವು ಬಗೆಯ ಸಾಬೂನುಗಳಿಗೆ ಕೊಡುವ ಸುಗಂಧ ದ್ರವ್ಯಗಳನ್ನು ಸ್ಥಿರೀಕರಣಗೊಳಿಸಲು ಬಳಸುತ್ತಾರೆ. ಎಲೆಗಳನ್ನು ಆಮಶಂಕೆ. ಅತಿಸಾರ, ವಾಂತಿ ಮುಂತಾದವನ್ನು ನಿಲ್ಲಿಸಲು ಉಪಯೋಗಿಸುವುದಲ್ಲದೆ ತರೆಚು ಗಾಯಗಳಿಗೂ ಬೊಕ್ಕೆಗಳಿಗೂ ಹಚ್ಚಲು ಬಳಸುತ್ತಾರೆ. ಬೇರು ಮತ್ತು ತೊಗಟೆಗಳನ್ನು ಶಕ್ತಿವರ್ಧಕ, ಜೀರ್ಣಕಾರಿ ಹಾಗೂ ವಾತಹರ ಔಷಧಿಗಳಾಗಿ ಉಪಯೋಗಿಸುತ್ತಾರೆ. ಇದರ ಚೌಬೀನೆ ಗಡುಸಾಗಿ ನಯವಾದ ಎಳೆಗಳ ವಿನ್ಯಾಸವನ್ನು ಹೊಂದಿದೆ. ಹಾಗೂ ದೀರ್ಘಕಾಲ ಬಾಳಿಕೆ ಬರುತ್ತದೆ. ಆದ್ದರಿಂದ ಇದನ್ನು ವ್ಯವಸಾಯದ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಕರಿಬೇವಿನ ಎಲೆಗಳನ್ನು ತೋರಣ್, ವಡಾ, ರಸಂ ಮತ್ತು ಕಢಿ ಪದಾರ್ಥಗಳನ್ನು ತಯಾರಿಸಲು ಸಹ ಬಳಸಲಾಗುತ್ತದೆ. ತಾಜಾ ರೂಪದಲ್ಲಿ ಇವುಗಳು ಅತೀ ಅಲ್ಪ ಬಾಳಿಕೆಯ ಕಾಲಾವಧಿಯನ್ನು ಹೊಂದಿರುತ್ತವೆ ಮತ್ತು ಇವುಗಳು ರೆಫ್ರಿಜರೇಟರ್ನಲ್ಲಿಯೂ ತಾಜಾವಾಗಿರಲಾರವು. ಇವುಗಳು ಒಣ ರೂಪದಲ್ಲಿಯೂ ಲಭ್ಯವಿರುತ್ತವೆ, ಆದರೆ ಸುವಾಸನೆಯು ಅತೀ ಕಡಿಮೆ ಪ್ರಮಾಣದಲ್ಲಿರುತ್ತದೆ.
ಪ್ರಸರಣ
ನೆಡಲು ಬೀಜಗಳು ಹಣ್ಣಾಗಿರಬೇಕು ಮತ್ತು ತಾಜಾ ಆಗಿರಬೇಕು; ಒಣಗಿದ ಅಥವಾ ಬಾಡಿದ ಹಣ್ಣುಗಳು ಮೊಳೆಯುವುದಿಲ್ಲ. ಒಂದೋ ಪೂರ್ಣ ಹಣ್ಣನ್ನು (ಅಥವಾ ಹಣ್ಣಿನ ತಿರುಳನ್ನು ತೆಗೆಯಿರಿ) ಕುಂಡದಲ್ಲಿ ನೆಡಬೇಕಾಗುತ್ತದೆ ಮತ್ತು ಅದನ್ನು ಒಣಗಿಸದೇ ತೇವಾಂಶದಲ್ಲಿ ಇಡಬೇಕಾಗುತ್ತದೆ.[original research?] ಕರಿಬೇವು ಸಸ್ಯವನ್ನು ಸಸ್ಯಗಳ ಸುತ್ತಲೂ ಬೇರಿನಿಂದ ಹೊರಟಿರುವ ಸಸಿಗಳಿಂದಲೂ ಬೀಜಗಳಿಂದಲೂ ವೃದ್ಧಿಮಾಡಬಹುದು. ಚೌಗುಪ್ರದೇಶಗಳಲ್ಲಿ ಇದರ ಬೇಸಾಯ ಮಾಡಲು ಸಾಧ್ಯವಿಲ್ಲ. ಸಸಿ ನಾಟಿಮಾಡಿದ ಅನಂತರ ಇದು ಸರಿಯಾಗಿ ಬೇರುಬಿಟ್ಟು ಚಿಗುರುವ ತನಕ ಎಚ್ಚರಿಕೆ ವಹಿಸಬೇಕು. ಸಸಿನೆಟ್ಟ 3-4 ವರ್ಷಗಳ ಅನಂತರ ಎಲೆಗಳನ್ನು ಕೊಯ್ಯುಬಹುದು. ಈ ಸಸ್ಯ ಬಹಳ ನಿಧಾನವಾಗಿ ಬೆಳೆಯುವ ಗುಣವುಳ್ಳದ್ದು. ಆದ್ದರಿಂದ ಎಳೆಯ ಸಸಿಯಾಗಿರುವಾಗ ಎಲೆ ಕೊಯ್ಯುಲು ಪ್ರಾರಂಭಿಸಿದರೆ ಬೆಳೆವಣಿಗೆ ನಿಂತುಹೋಗಿ ಗಿಡ ಸತ್ತುಹೋಗುವ ಸಾಧ್ಯತೆ ಹೆಚ್ಚು.