ಬೆಂಗಳೂರು: ಗಂಡನ ಮೇಲಿನ ಕೋಪಕ್ಕೆ ಪತ್ನಿಯೊಬ್ಬಳು ಮಗು ಜೊತೆ ಇಲಿ ಪಾಷಾಣ ಬೆರೆಸಿದ ಚಹಾವನ್ನು ಕುಡಿದ ಘಟನೆ ನಗರದಲ್ಲಿ ನಡೆದಿದೆ.
ಘಟನೆಯಲ್ಲಿ 1 ವರ್ಷ 8 ತಿಂಗಳ ಮಗು ಚಾರ್ವಿ ಮೃತಪಟ್ಟರೆ ತಾಯಿ ಚಂದ್ರಿಕಾ (26) ಆಸ್ಪತ್ರೆ ಪಾಲಾಗಿದ್ದಾಳೆ. ಇದನ್ನೂಓದಿ : ಕರ್ನಾಟಕ ಪಬ್ಲಿಕ್ ಶಾಲೆಯ ನವೀಕರಣಗೊಂಡ ಶಾಲಾ ಕೊಠಡಿಗಳ ಉದ್ಘಾಟನೆ
ಬೆಂಗಳೂರಿನ ತಿಗಳರಪಾಳ್ಯದಲ್ಲಿ ಯೋಗೇಶ್, ಚಂದ್ರಿಕಾ ದಂಪತಿ ನೆಲೆಸಿದ್ದರು. ಜಗಳ ಮಾಡಿದ ನಂತರ ಯೋಗೇಶ್ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿದ್ದಾಗ ಚಹಾಗೆ ಇಲಿ ಪಾಷಾಣ ಬೆರೆಸಿ ಮಗಳಿಗೆ ಕುಡಿಸಿ ಚಂದ್ರಿಕಾ ಕುಡಿದಿದ್ದಾಳೆ.
ಇಲಿ ಪಾಷಾಣ ಸೇವಿಸಿದ ಬಳಿಕ ಪತಿಗೆ ಕರೆ ಮಾಡಿ ಚಂದ್ರಿಕಾ ವಿಷಯ ತಿಳಿಸಿದ್ದಾಳೆ. ಕೂಡಲೇ ಮನೆ ಬಳಿ ಬಂದು ಮಗು ಮತ್ತು ಪತ್ನಿಯನ್ನ ಯೋಗೇಶ್ ಆಸ್ಪತ್ರೆಗೆ ದಾಖಲಿಸಿದ್ದ. ಚಿಕಿತ್ಸೆ ಫಲಕಾರಿಯಾಗದೇ ಚಾರ್ವಿ ಸಾವನ್ನಪ್ಪಿದರೆ, ಚಂದ್ರಿಕಾಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.