ಬಾಗ್ದಾದ್: ಪೂರ್ವ ಇರಾಕ್ನ (Iraq) ಕುಟ್ ನಗರದ (Kut City) ಶಾಪಿಂಗ್ ಮಾಲ್ವೊಂದರಲ್ಲಿ (Shopping Mall) ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕನಿಷ್ಟ 50 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದನ್ನೂ ಓದಿ : ಪರಿಸರ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಗೃಹ ಸಚಿವ ಡಾ| ಜಿ.ಪರಮೇಶ್ವರ್ ಚಾಲನೆ
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮಾಲ್ನಲ್ಲಿ ಬೆಂಕಿ (Fire Accident) ಹೊತ್ತಿಕೊಳ್ಳಲು ಕಾರಣ ಏನು ಎಂಬುದರ ಕುರಿತು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ವಾಸಿಟ್ ಪ್ರಾಂತ್ಯದ ಗವರ್ನರ್ ತಿಳಿಸಿದ್ದಾರೆ. ಇದನ್ನೂ ಓದಿ : ಕಾರಾಗೃಹ ಪ್ರಧಾನ ಕಚೇರಿಯ ಅನೆಕ್ಸ್ ಬಿಲ್ಡಿಂಗ್ ನಿರ್ಮಾಣದ ಕಾಮಗಾರಿಗೆ ಶಂಕುಸ್ಥಾಪನೆ
ಪ್ರಾಂತ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ನಡೆಸುವಂತೆ ಘೋಷಿಸಲಾಗಿದೆ. ಅಲ್ಲದೇ ಕಟ್ಟಡ ಮತ್ತು ಮಾಲ್ ಮಾಲೀಕರ ವಿರುದ್ಧ ದೂರು ದಾಖಲಿಸುವಂತೆ ಗರ್ವನರ್ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.