ವಿಶ್ವಯೋಗ ದಿನಾಚರಣೆ
ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯಡಿಯಲ್ಲಿ ವಿಶ್ವಯೋಗ ದಿನಾಚರಣೆಯನ್ನುಆಚರಿಸಲಾಯಿತು.
“ಒಂದು ಭೂಮಿ, ಒಂದು ಆರೋಗ್ಯ” ಎನ್ನುವ ಶೀರ್ಷಿಕೆಯಡಿಯಲ್ಲಿ, ನಮ್ಮ ಭೂಮಿ ಹಾಗೂ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ಎನ್ನುವ ತತ್ವದಡಿಯಲ್ಲಿ ಇಂದಿನ ಯೋಗ ದಿನಾಚರಣೆಯನ್ನುಆಚರಿಸಲಾಗುತ್ತಿದೆ.ಉಸಿರು, ಮನಸ್ಸು ಹಾಗೂ ಶರೀರ ಈ ಮೂರನ್ನುಜೋಡಿಸಲು ಯೋಗದಿಂದ ಮಾತ್ರ ಸಾದ್ಯ.ಶಾರೀರವಾಗಿ ಸಧೃಡವಾಗಲು, ಮಾನಸಿಕವಾಗಿ ಸಬಲರಾಗಲು, ಈ ಯೋಗವು ದಾರಿದೀಪವಾಗಿದೆ.ಅಷ್ಟಾಂಗ ಯೋಗದಿಂದ ಉತ್ತಮವಾದ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಸಾಮಾಜಿಕವಾಗಿ ಉತ್ತಮ ಸಮಾಜಕಟ್ಟುವಲ್ಲಿ, ಕೌಟಿಂಬಿಕವಾಗಿ ಮಾನಸಿಕ ನೆಮ್ಮದಿಯಿಂದ ಹಾಗೂ ವ್ಯವಹಾರವನ್ನು ಈ ಯೋಗವು ಸಂಪೂರ್ಣವಾಗಿ ಕಲಿಸಿಕೊಡುತ್ತದೆ.ಯೋಗವು ಪ್ರಾಚೀನಕಾಲದಲ್ಲಿ ಶಿವ ದೇವರು ಪರಿಚಯಿಸಿದರು.ಕಾಲಾನುಕ್ರಮದಲ್ಲಿ ಪತಂಜಲಿ ಮಹರ್ಷಿಯು ಪ್ರಾಣಿ- ಪಕ್ಷಿಗಳ ಮೂಲಕ ಯೋಗಾಧ್ಯಯನ ಮಾಡಿಯೋಗ ಪಿತಾಮಹರಾದರು.  ಇದನ್ನೂ ಓದಿ :  ನೂತನವಾಗಿ ನಿರ್ಮಿಸಿರುವ ಅಗ್ನಿಶಾಮಕ ಠಾಣೆಯ ಕಟ್ಟಡ ಉದ್ಘಾಟನೆ
ಇಂದು ಯೋಗ ಅಂತರಾಷ್ಟ್ರೀಯ  ಮಟ್ಟದಲ್ಲಿ ಗುರುತಿಸಿಕೊಂಡಿದೆ, ಯೋಗದ ಮಹತ್ವವನ್ನು ಇಡೀ ಜಗತ್ತು ಅರಿತು, ಯೋಗವನ್ನು ಅಭ್ಯಸಿಸುತ್ತಿದ್ದಾರೆ, ಇದು ಭಾರತಕ್ಕೆ ಹೆಮ್ಮೆಯ ಸಂಗತಿಯಾಗಿದೆ.ಇಂದು ಅಂಕಗಳಿಗೋಸ್ಕರ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದರೆ, ಶ್ರೀರಾಮ ಶಾಲೆಯು ಸಂಸ್ಕಾರ, ಸಂಸ್ಕೃತಿಯೊಂದಿಗೆ ಶಿಕ್ಷಣವನ್ನು ನೀಡುತ್ತಿದೆ. ಜೊತೆಗೆ ಯೋಗವನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸಧೃಡವಾಗಲು ಈ ಶಿಕ್ಷಣ ಸಂಸ್ಥೆಯು ಶ್ರಮಿಸುತ್ತಿದೆ. ಅವರಿಗೆ ಅಭಾರಿಯಾಗಿದ್ದೇನೆ” ಎಂದು ಪತಂಜಲಿ ಯೋಗಶಿಕ್ಷಣ ಸಮಿತಿ ವಿಟ್ಲ ಶಾಖೆಯ ಮುಖ್ಯ ಶಿಕ್ಷಕ, ಕೀರ್ತಿಕಪೂರ್ ವಿದಾರ್ಥಿಗಳಿಗೆ  ಶುಭ ಹಾರೈಸಿದರು.
ಕಾರ್ಯಕ್ರಮಕ್ಕೆಅತಿಥಿ ಅಭ್ಯಾಗತರನ್ನು ಪುಸ್ತಕ ನೀಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ೭ನೇ ತರಗತಿಯ ಅಪ್ರಮೇಯ ತೋಳ್ಪಾಡಿ ಯೋಗ ಗೀತೆಯನ್ನು ಹಾಡಿದನು. ತಬಲದಲ್ಲಿ ೭ನೇ ತರಗತಿಯ ವಿಘ್ನೇಶ್ ಸಹಕರಿಸಿದನು. ನಂತರ ಪತಂಜಲಿ ಯೋಗಶಿಕ್ಷಣ ಸಮಿತಿಯ ಸದಸ್ಯರ ಮಾರ್ಗದರ್ಶನದಲ್ಲಿ ಬಾಲಕರು ಹಾಗೂ ಬಾಲಕಿಯರಿಗೆ ಯೋಗಭ್ಯಾಸ ಮಾಡಿಸಲಾಯಿತು.
ವೇದಿಕೆಯಲ್ಲಿ ಶ್ರೀನಿಕೇತನ ಶಾಖೆ ಕೆಲಿಂಜ ಇದರ ಸಂಚಾಲಕ ರಾಮಣ್ಣ, ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸಹಶಿಕ್ಷಕಿ ಕುಸುಮ, ಯೋಗಶಿಕ್ಷಕಿ ವೃಂದ ಹಾಗೂ ಮುಖ್ಯೋಪಾಧ್ಯಾಯ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಾಥಮಿಕ ಶಾಲೆಯ ಯೋಗ ಶಿಕ್ಷಕಿ ದೇವಕಿ ಹಾಗೂ ದೈ.ಶಿ.ಶಿಕ್ಷಕಿ ಸ್ನೇಹಾ ನಿರ್ವಹಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ರಾಮ್ ಸ್ವರೂಪ್ ನಿರೂಪಿಸಿ, ಸ್ವಸ್ತಿಕ್ ಸ್ವಾಗತಿಸಿ, ಆರವ್ ವಂದಿಸಿದರು.