ವಾಷಿಂಗ್ಟನ್‌: ಇಸ್ರೇಲ್ ಮತ್ತು ಇರಾನ್  ಪರಸ್ಪರ ಐದನೇ ದಿನವೂ ದಾಳಿ ನಡೆಸಿವೆ. ಇರಾನ್ ಜನತೆ ತಕ್ಷಣವೇ ಟೆಹ್ರಾನ್‌ ತೊರೆಯುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಸೂಚಿಸಿದ್ದಾರೆ.

ಮಧ್ಯಪ್ರಾಚ್ಯದ ಪರಿಸ್ಥಿತಿಯಿಂದಾಗಿ ಟ್ರಂಪ್ ಸೋಮವಾರ ಕೆನಡಾದಲ್ಲಿ ನಡೆದ ಗ್ರೂಪ್ ಆಫ್ ಸೆವೆನ್ ಶೃಂಗಸಭೆಯಿಂದ ಒಂದು ದಿನ ಮುಂಚಿತವಾಗಿ ಹೊರಡಬೇಕಿತ್ತು ಎಂದು ಶ್ವೇತಭವನ ತಿಳಿಸಿದೆ. ಇಸ್ರೇಲ್ ಮತ್ತು ಇರಾನ್ ಕದನ ವಿರಾಮಕ್ಕೆ ಒಪ್ಪಿಗೆ ನೀಡುವುದು ತಕ್ಷಣದ ಉದ್ದೇಶವಾಗಿರುವುದರಿಂದ ಟ್ರಂಪ್ ಅವರ ಆರಂಭಿಕ ನಿರ್ಗಮನ ಸಕಾರಾತ್ಮಕವಾಗಿದೆ ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೇಳಿದ್ದಾರೆ.

ನಾನು ಹೇಳಿದ ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಎಂತಹ ನಾಚಿಕೆಗೇಡಿನ ಸಂಗತಿ. ಮಾನವ ಜೀವ ವ್ಯರ್ಥ. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ. ನಾನು ಅದನ್ನು ಮತ್ತೆ ಮತ್ತೆ ಹೇಳಿದ್ದೇನೆ. ಎಲ್ಲರೂ ತಕ್ಷಣ ಟೆಹ್ರಾನ್ ಅನ್ನು ಬಿಟ್ಟು ಹೊರಡಿ ಎಂದು ಎಕ್ಸ್‌ ಖಾತೆಯಲ್ಲಿ ಟ್ರಂಪ್‌ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ : ದಾವಣಗೆರೆ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ, ಶಂಕುಸ್ಥಾಪನೆ ನೆರವೇರಿಸಿದ -ಸಿ.ಎಂ.

ಮಂಗಳವಾರ ಮುಂಜಾನೆ ಟೆಹ್ರಾನ್‌ನಲ್ಲಿ ಸ್ಫೋಟಗಳು ಮತ್ತು ಭಾರೀ ವಾಯು ರಕ್ಷಣಾ ಗುಂಡಿನ ದಾಳಿ ನಡೆದಿರುವುದಾಗಿ ಇರಾನಿನ ಮಾಧ್ಯಮಗಳು ವರದಿ ಮಾಡಿವೆ. 320 ಕಿಮೀ (200 ಮೈಲುಗಳು) ದೂರದಲ್ಲಿರುವ ಪ್ರಮುಖ ಪರಮಾಣು ಸ್ಥಾಪನೆಗಳ ನೆಲೆಯಾದ ನಟಾಂಜ್‌ನಲ್ಲಿಯೂ ವಾಯು ರಕ್ಷಣಾ ಪಡೆಗಳನ್ನು ಸಕ್ರಿಯಗೊಳಿಸಲಾಗಿದೆ ಎಂದು ತಿಳಿಸಿವೆ. ಇದನ್ನೂ ಓದಿ :  ಕೇಂದ್ರ ಪುರಸ್ಕೃತ ಸಕ್ಷಮ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ LED TV ವಿತರಣೆ

ಇಸ್ರೇಲ್‌ನಲ್ಲಿ ಮಧ್ಯರಾತ್ರಿಯ ನಂತರ ಟೆಲ್ ಅವೀವ್‌ನಲ್ಲಿ ವಾಯುದಾಳಿ ಸೈರನ್‌ಗಳು ಕೂಗಿದವು. ಇರಾನಿನ ಕ್ಷಿಪಣಿಗಳು ಮತ್ತೆ ಇಸ್ರೇಲ್‌ ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದೆ.

ಐದು ದಿನಗಳಲ್ಲಿ ಇರಾನ್‌ನಲ್ಲಿ 224 ಮಂದಿ ಸಾವಿಗೀಡಾಗಿದ್ದಾರೆ. ಇಸ್ರೇಲ್‌ನಲ್ಲಿ 24 ನಾಗರಿಕರು ಸಾವನ್ನಪ್ಪಿದ್ದಾರೆ. ಇರಾನಿನ ದಾಳಿಯಿಂದ ಹಾನಿಗೊಳಗಾದ ಸುಮಾರು 3,000 ಇಸ್ರೇಲಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಇಸ್ರೇಲ್ ಹಣಕಾಸು ಸಚಿವ ಬೆಜಲೆಲ್ ಸ್ಮೋಟ್ರಿಚ್ ಹೇಳಿದ್ದಾರೆ.