ಕಲ್ಲಡ್ಕ: ಕಲ್ಲಡ್ಕ ಶ್ರೀ ರಾಮಆಂಗ್ಲ ಮಾಧ್ಯಮ ಶಾಲೆಯ ನೂತನ ಭವನ”ವಿಕ್ರಮಾದಿತ್ಯ” ವನ್ನು ಜೂ. 12 ರಂದು ಶ್ರೀ ಸತ್ಯ ಸಾಯಿ ಮಾನವಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ “ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಲೋಕಾರ್ಪಣೆಗೈದರು. ಇದನ್ನೂ ಓದಿ : ಅಹಮದಾಬಾದ್ ವಿಮಾನ ದುರಂತದಲ್ಲಿ ಜೀವಹಾನಿಗೆ ಪ್ರಧಾನಮಂತ್ರಿ ಸಂತಾಪ
ಚೆಂಡೆ ಮತ್ತು ಯಕ್ಷಗಾನ ವೇಷಧಾರಿಗಳೊಂದಿಗೆ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತವನ್ನು ನೀಡಲಾಯಿತು. ದೀಪ ಪ್ರಜ್ವಲನೆಯ ನಂತರ ಗಣಪತಿ ಸ್ತುತಿ ಮತ್ತು ಗಾಯತ್ರಿ ಮಂತ್ರದೊಂದಿಗೆ ಸ್ವಾಮೀಜಿಗಳು ವಿದ್ಯಾರ್ಥಿಗಳಿಗೆ ಮೊದಲ ಪಾಠವನ್ನು ಮಾಡಿದರು.
ನಂತರ ಶ್ರೀರಾಮ ಮಂದಿರದ ಬಳಿ ಇರುವ ರಾಮಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವು ಸರಸ್ವತಿಂದನಾದಿಂದ ಪ್ರಾರಂಭಗೊಂಡು ಶಾಂತಿ ಮಂತ್ರದೊಂದಿಗೆ ಕೊನೆಗೊಂಡಿತು.
ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಶ್ರೀ ರಾಮನಿಗೆ ಆರತಿ ಬೆಳಗಿನ ನಂತರ ಶ್ರೀ ರಾಮ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಕಾರ್ಯಕ್ರಮಕ್ಕೆ ಪ್ರಾಸ್ತಾವಿಕ ನುಡಿಗಳನ್ನಾಡುವುದರ ಜೊತೆಗೆ ಸ್ವಾಗತವನ್ನು ಕೋರಿದರು. ಮುಖ್ಯ ಅತಿಥಿಗಳಾದ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಹಿತನುಡಿಗಳನ್ನಾಡುತ್ತಾ ” ಭಾರತೀಯ ಶಿಕ್ಷಣ ಪ್ರಣಾಳಿಕೆಯು ಪ್ರಾಚೀನತೆ ಜೊತೆಗೆ ಆಧುನಿಕ ವಿಜ್ಞಾನದೊಂದಿಗೆ ಸಮನ್ವಯವಾಗಿರಬೇಕು. ಇದನ್ನೂ ಓದಿ : ವಿಶಿಷ್ಟ ವನ್ಯಜೀವಿ ಸಂರಕ್ಷಣೆ, ರಕ್ಷಣೆ ಮತ್ತು ಪುನರ್ವಸತಿ ಉಪಕ್ರಮವಾದ ‘ವನತಾರಾ’ ಪ್ರಧಾನಮಂತ್ರಿಗಳಿಂದ ಉದ್ಘಾಟನೆ
ಆಧ್ಯಾತ್ಮಿಕ ಚಿಂತನೆಯನ್ನು ವಿದ್ಯಾರ್ಥಿಗಳಿಗೆ ಹೇಳಿಕೊಳ್ಳುವುದು ಅಗತ್ಯವಾಗಿದೆ. ಶ್ರೀರಾಮ ವಿದ್ಯಾಕೇಂದ್ರವು ಆಧುನಿಕ ಮತ್ತು ಆಧ್ಯಾತ್ಮಿಕತೆ ಸೇರಿದಂತಹ ವಿದ್ಯಾಭ್ಯಾಸವನ್ನು ಸಮಾಜಕ್ಕೆ ನೀಡುತ್ತಿದೆ ” ಎಂದು ಪ್ರಶಂಸಿಸಿದರು. ತದನಂತರ ತನ್ನ ಸಾಧನೆಯ ಮೂಲಕ ಸಮಾಜಕ್ಕೆ ಪ್ರೇರಣೆಯಾದ ಉದ್ಯಮಿ ಶಶಿಧರ ಶೆಟ್ಟಿ ಬರೋಡ ಅವರನ್ನು ಸನ್ಮಾನಿಸಲಾಯಿತು. ಜೊತೆಗೆ ಶಶಿಧರ ಶೆಟ್ಟಿ ಬರೋಡ ಅವರು ಕಾರ್ಯಕ್ರಮಕ್ಕೆ ಶುಭವನ್ನುಕೋರಿದರು. ಈ ವೇಳೆ ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಶ್ರೀ ನರಸಿಂಹಮೂರ್ತಿ, ಶ್ರೀರಾಮ ವಿದ್ಯಾಕೇಂದ್ರದಅಧ್ಯಕ್ಷರಾದ ಶ್ರೀ ನಾರಾಯಣ ಸೋಮಯಾಜಿಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಶ್ರೀ ರಾಮ ವಿದ್ಯಾಕೇಂದ್ರದ ಕಾರ್ಯನಿರ್ವಾಹಣಧಿಕಾರಿ ಶ್ರೀ ಕೃಷ್ಣ ಪ್ರಸಾದ್ ಕಾಯರ್‌ಕಟ್ಟೆ ವಂದಿಸಿದರು. ಈ ವೇಳೆ ಶ್ರೀ ರಾಮ ವಿದ್ಯಾಕೇಂದ್ರದ ಮಾತೃ ಮಂಡಳಿಯ ಸದಸ್ಯರು, ವಿದ್ಯಾಕೇಂದ್ರದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.