ರ್ನಾಟಕದಲ್ಲಿ ಕಮಲ್ ಹಾಸನ್  ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ `ಕನ್ನಡತಿ’  ಧಾರವಾಹಿ ಖ್ಯಾತಿಯ ರಂಜನಿ ರಾಘವನ್ , ಕಮಲ್ ಹಾಸನ್ ಅವರಿಗೆ ತಾವು ಬರೆದ ಕನ್ನಡದ ಪುಸ್ತಕವನ್ನು ನೀಡಿರುವ ಪೋಸ್ಟ್ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  ಇದನ್ನೂ ಓದಿ : ಕ್ಷಮೆ ಕೇಳದಿದ್ರೆ ಕಮಲ್ ಸಿನಿಮಾ ರಿಲೀಸ್ ಮಾಡೋಕೆ ಅವಕಾಶ ಕೊಡಲ್ಲ- ಸಾರಾ ಗೋವಿಂದು
ಇದೀಗ ರಂಜನಿ ರಾಘವನ್ ತಮ್ಮ ಖಾತೆಯಲ್ಲಿ ಕಮಲ್ ಸರ್‌ಗೆ `ಕನ್ನಡ’ ಪುಸ್ತಕ ಎಂದು ಬರೆದುಕೊಂಡು ಕಮಲ್ ಹಾಸನ್ ಅವರಿಗೆ ತಾವು ಬರೆದಿರುವ `ಸ್ಟೈಲ್‌ ರೈಟ್’ ಮತ್ತು `ಕಥೆ ಡಬ್ಬಿ’ ಎಂಬ ಪುಸ್ತಕಗಳನ್ನು ನೀಡಿದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ :ತಮಿಳಿನಿಂದ ಕನ್ನಡ ಎಂದ ಕಮಲ್ ಹಾಸನ್‌ಗೆ ಸಂಕಷ್ಟ- ಕ್ಷಮೆಯಾಚಿಸುವಂತೆ ಆಗ್ರಹ
ಆದರೆ ಅವರು ಈ ಪುಸ್ತಕವನ್ನು ಯಾವಾಗ ನೀಡಿದ್ದಾರೆ ಎಂಬುದರ ಬಗ್ಗೆ ಉಲ್ಲೇಖಿಸಿಲ್ಲ. ಕನ್ನಡ ಮೇಷ್ಟ್ರಮ್ಮ ಅವರ ಈ ಪೋಸ್ಟ್‌ಗೆ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಜೈ ಕನ್ನಡಾಂಬೆ, ಕಮಲ್‌ಗೆ ಕನ್ನಡ ಪಾಠ ಕಲಿಸಿದ ಕನ್ನಡತಿ ಎಂಬೆಲ್ಲಾ ಕಾಮೆಂಟ್ ಸುರಿಮಳೆಗಳನ್ನೇ ಹರಿಸಿದ್ದಾರೆ.    ಇದನ್ನೂ ಓದಿ : ಸೀರಿಯಲ್ ನಟಿ ವೈಷ್ಣವಿ ಗೌಡ ಮದುವೆ ಶಾಸ್ತ್ರಗಳು ಆರಂಭ‌
ರಂಜನಿ ರಾಘವನ್ ಅವರು ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಧಾರವಾಹಿಯಲ್ಲಿ ಕನ್ನಡ ಉಪನ್ಯಾಸಕಿಯ ಪಾತ್ರದಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನದಲ್ಲಿ ಕನ್ನಡದ ಮೇಷ್ಟ್ರಾಗಿ ಅಚ್ಚೆ ಹಾಕಿದ್ದರು. ಈ ಧಾರವಾಹಿಯ ಬಳಿಕ ಅವರು ನಟನೆಯಿಂದ ದೂರ ಉಳಿದು ನಿರ್ದೇಶದತ್ತ ಹೆಜ್ಜೆ ಇಟ್ಟಿದ್ದಾರೆ. `ಡಿ ಡಿ ಡಿಕ್ಕಿ’ ಚಿತ್ರವನ್ನು ನಿರ್ದೇಶಿದ್ದು, ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.