ಕಾರ್ಯಕ್ರಮದಲ್ಲಿ Kick Ash ಅಭಿಯಾನ ಮತ್ತು ಅದರ ಅಧಿಕೃತ ವೆಬ್‌ಸೈಟ್ ಅನ್ನು ಉದ್ಘಾಟಿಸಲಾಯಿತು.
ನಂತರ 50 ವಿದ್ಯಾರ್ಥಿಗಳೊಂದಿಗೆ ಉತ್ಸಾಹಭರಿತ ಪ್ರಶ್ನೋತ್ತರ ಕಾರ್ಯರ್ಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನಡೆದ ಚರ್ಚೆಗಳು ತಂಬಾಕು ಸೇವನೆ ಮತ್ತು ವೇಪ್ ಗಳ ಬಳಕೆಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಬೆಳಕು ಚೆಲ್ಲಿದವು. ಇದರೊಂದಿಗೆ ಸಾರ್ವಜನಿಕ ಆರೋಗ್ಯ ಜಾಗೃತಿಯ ಮೂಲಕ ತಂಬಾಕು ವ್ಯಸನ ಮುಕ್ತ ಭವಿಷ್ಯದ ಕಡೆಗೆ ಜವಾಬ್ದಾರಿಯುತ ಹಾಗೂ ಧೃಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯತೆಯನ್ನು ತಿಳಿಸಲಾಯಿತು