9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಪ್ರಯುಕ್ತ ಯೆನೆಪೋಯ ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ, ನರಿಂಗಾನ (ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯದ ಅಂಗ ಸಂಸ್ಥೆ) ವತಿಯಿಂದ ನಾಡಿನ ಶ್ರೇಷ್ಠ ಆಯುರ್ವೇದ ವೈದ್ಯರಿಗೆ ವರ್ಷಂಪ್ರತಿ ನೀಡಲಾಗುತ್ತಿರುವ ಯೆನ್ ಆಯು ವೈದ್ಯರತ್ನ ಪ್ರಶಸ್ತಿಯನ್ನು 2024ನೇ ಸಾಲಿನಲ್ಲಿ ವೈದ್ಯ ನಿರಂಜನ್ ಆಚಾರ್ಯ ಎಂ.ಡಿ,ಆಯು, ಬಿ ಸಿ ರೋಡ್, ಅವರಿಗೆ ಅ.29 ರಂದು ನೀಡಿ ಗೌರವಿಸಲಾಯಿತು.

ವೈದ್ಯ ನಿರಂಜನ್ ಆಚಾರ್ಯಅವರು ಪ್ರಸ್ತುತ ಶ್ರೀಕೃಷ್ಣ ಕ್ಲಿನಿಕ್, ಬಿ. ಸಿ.ರೋಡ್, ಎಂಬಲ್ಲಿ ಸಾಂಪ್ರದಾಯಿಕ ಹಾಗೂ ಪಾರಂಪರಿಕ ಆಯುರ್ವೇದ ಚಿಕಿತ್ಸಾ ಪದ್ಧತಿಯನ್ನು ಅನುಸರಿಸುವುದರೊಂದಿಗೆ ನಿರಂತರವಾಗಿ ಆಯುರ್ವೇದ ಕ್ಷೇತ್ರದಲ್ಲಿ ರೋಗಿಗಳಿಗೆ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಸರೆ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರಾಗಿರುವ ಡಾ.ಆಶಾಜ್ಯೋತಿ ರೈ, ಅತಿಥಿಗಳಾಗಿ ಡಾ. ಬಿ.ಹೆಚ್ ಶ್ರೀಪತಿ ರಾವ್, ಸಹ ಉಪಕುಲಪತಿಗಳು, ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾನಿಲಯ ಹಾಗೂ ಪ್ರಾಂಶುಪಾಲರು ಡಾ.ಗುರುರಾಜ ಹೆಚ್, ಉಪ ಪ್ರಾಂಶುಪಾಲರು ಹಾಗೂ ವೈದ್ಯಕೀಯ ಅಧೀಕ್ಷಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.