ಕನ್ನಡ ಜಿಲ್ಲೆಯ ಶಿಕ್ಷಣದಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ ಸೇನೆಯನ್ನು ಸೇರಿ ಗೌರವ ಪಡೆಯುವಲ್ಲಿ ಮತ್ತು ಸರಕಾರಿ ನೌಕಾರಿಯನ್ನು ಪಡೆಯುವಲ್ಲಿ ಬಹಳ ಹಿಂದುಳಿದಿದ್ದಾರೆ – ನಿವೃತ್ತ ಸೈನಿಕ ದಾಸಪ್ಪ

ಕಲ್ಲಡ್ಕ: ದಕ್ಷಿಣಕನ್ನಡ ಜಿಲ್ಲೆಯು ಶಿಕ್ಷಣದಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ ಸೇನೆಯನ್ನು ಸೇರಿ ಗೌರವ ಪಡೆಯುವಲ್ಲಿ ಮತ್ತು ಸರಕಾರಿ ನೌಕಾರಿಯನ್ನು ಪಡೆಯುವಲ್ಲಿ ಬಹಳ ಹಿಂದುಳಿದಿದ್ದಾರೆ.ಶಾರೀರಿಕ ವಾದ ಉತ್ತಮ ಮೈಕಟ್ಟು ಮತ್ತು ಶಿಕ್ಷಣ ಹೊಂದಿದ್ದಾಗ ಸೇವೆಗೆ ಸೇರುವ ಅವಕಾಶ ಎಲ್ಲರಿಗೂ ಇದೆ, ಯಾವುದೇ ಶಿಕ್ಷಣ ಮತ್ತು ವೃತ್ತಿಯನ್ನು ಹೊಂದಿದ್ದರೂ ಅವರು ಸೇನೆಯಲ್ಲಿ ಸೇವೆಯನ್ನು ಸಲ್ಲಿಸಲು ಸಾಧ್ಯವಿದೆ, ವಿದ್ಯಾರ್ಥಿಗಳಿಗೆ ಪ್ರಾಥಮಿಕ ತರಗತಿಗಳಲ್ಲಿ ಸೇನೆ ಮತ್ತು ದೇಶ ಸೇವೆಯ ಬಗ್ಗೆ ಮಾಹಿತಿ ಹಾಗೂ ದೇಶದ ಬಗ್ಗೆ ಅಭಿಮಾನವನ್ನು ಮೂಡಿಸುವ ಶಿಕ್ಷಣ ಸಿಗಬೇಕು ಆಗ ವಿದ್ಯಾರ್ಥಿಗಳಿಗೆ ದೇಶ ಪ್ರೇಮದ ಮೂಲಕ ದೇಶ ಸೇವೆ ಮಾಡುವ ಹುಮ್ಮಸ್ಸು. ಬೆಳೆಯುತ್ತದೆ ಎಂಬುದಾಗಿ ನಿವೃತ್ತ ಸೈನಿಕ ದಾಸಪ್ಪ ಪೂಜಾರಿ ನೆಕ್ಕಿಲಾರ್ ಹೇಳಿದರು. ಇದನ್ನೂ ಓದಿ : ಸುರಕ್ಷಾ ಸಂಗಮ ಪೂರ್ಲಿಪ್ಪಾಡಿ ವತಿಯಿಂದ 79ನೇ ಸ್ವಾತಂತ್ರೋತ್ಸವ ಆಚರಣೆ

ಅವರು ಬಂಟ್ವಾಳ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಧ್ವಜಾರೋಹಣ ನಡೆಸಿ ತದನಂತರ ವಿದ್ಯಾರ್ಥಿಗಳು ಶಾಲಾ ಅಭಿಮಾನಿಗಳು ಜೊತೆ ಸೇರಿ ವೀರಕಂಭ ಗ್ರಾಮ ಪಂಚಾಯತ್ ತನಕ ಪ್ರಭಾತಬೇರಿ ನಡೆಸಲಾಯಿತು.

ವಿದ್ಯಾರ್ಥಿಗಳು ಸ್ವಾತಂತ್ರ್ಯ ದಿನಾಚರಣೆಯ ಕುರಿತಾದ ಭಾಷಣ ದೇಶಭಕ್ತಿ ಗೀತೆ ಮತ್ತು ನೃತ್ಯಗಳನ್ನು ಪ್ರದಶಿ೯ಸಿದರು.

ಕಾರ್ಯಕ್ರಮದಲ್ಲಿ ಕಡಂಬಿಲ ಶಂಕರ್ ನಾರಾಯಣ ಭಟ್, ಗ್ರಾಮ ಪಂಚಾಯಿತಿ ಸದಸ್ಯ ಮೀನಾಕ್ಷಿ,, ನಿವೃತ್ತ ಶಿಕ್ಷಕಿ ಶಕುಂತಳಾ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಈಶ್ವರ ಭಟ್ ರಾಕೋಡ್ , ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ರಮೇಶ್ ಮೈರಾ, ನಿಕಟ ಪೂರ್ವ ಎಸ್‌ಡಿಎಂಸಿ ಅಧ್ಯಕ್ಷರ ಸಂಜೀವ ಮೂಲ್ಯ, ಹಿರಿಯ ವಿದ್ಯಾರ್ಥಿಗಳು, ಮಕ್ಕಳ ಪೋಷಕರು, ಎಚ್ ಡಿ ಎಂ ಸಿ ಸದಸ್ಯರು, ಮುಖ್ಯ ಶಿಕ್ಷಕಿ ಬೆನಡಿಕ್ಟಾ ಆಗ್ನೇಸ್ ಮಂಡೋನ್ಸಾ., ಶಿಕ್ಷಕ ವೃಂದ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಹಾಗೂ ಊರ ವಿದ್ಯಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿಕ್ಷಕಿ ಸಂಪ್ರಿಯ ಸ್ವಾಗತಿಸಿ, ಶಿಕ್ಷಕಿ ಮುಷೀ೯ದಾ ಬಾನು ವಂದಿಸಿ, ಶಿಕ್ಷಕಿ ಅನುಷಾ ಕಾರ್ಯಕ್ರಮ ನಿರುಪಿಸಿದರು.