ದಾವಣಗೆರೆ: ಮನೆಯ ಮುಂಭಾಗ ಆಟವಾಡುತ್ತಿದ್ದ ಬಾಲಕಿಯನ್ನು ಇಬ್ಬರು ಅಪ್ರಾಪ್ತ ಬಾಲಕರು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ದಾವಣಗೆರೆ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ. ಇದನ್ನೂ ಓದಿ : ಒಂದೇ ತಿಂಗಳಲ್ಲಿ ಹೃದಯಾಘಾತಕ್ಕೆ 13 ಬಲಿ – ಕೋವಿಡ್ ಲಸಿಕೆ ಕಾರಣವಲ್ಲ ತನಿಖೆಯಲ್ಲಿ ಬಯಲು
ಮನೆಯ ಅಕ್ಕಪಕ್ಕದ ಬಾಲಕರು ಏಳು ವರ್ಷದ ಬಾಲಕಿಯ ಪರಿಚಯ ಮಾಡಿಕೊಂಡಿದ್ದರು. ಭಾನುವಾರ ಸಂಜೆ ಮನೆಯ ಮುಂಭಾಗ ಬಾಲಕಿ ಆಡವಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ 15 ಹಾಗೂ 17 ವರ್ಷದ ಇಬ್ಬರು ಅಪ್ರಾಪ್ತರು ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ.
ಆಟವಾಡುತ್ತಿದ್ದ ಮಗಳು ಕಾಣಿಸದ ಹಿನ್ನಲೆ ಬಾಲಕಿಯ ತಾಯಿ ಅಕ್ಕಪಕ್ಕ ಹುಡುಕಿಕೊಂಡು ಹೋಗಿದ್ದಾರೆ. ಮಗಳನ್ನು ಹುಡುಕಿಕೊಂಡು ನೆರೆ ಮನೆಗೆ ಹೋದಾಗ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರ ಎಸಗಿದ್ದು ಗೊತ್ತಾಗಿದೆ. ಈ ಸಂಬಂಧ ಬಾಲಕಿಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಇಬ್ಬರು ಬಾಲಕರನ್ನು ಬಂಧಿಸಿದ್ದಾರೆ.
ಪೊಲೀಸರು, ಬಾಲಕರಿಗೆ ವೈದ್ಯಕೀಯ ತಪಾಸಣೆ ಮಾಡಿಸಿ, ಪೋಕ್ಸೋ ಪ್ರಕರಣ (POCSO Case) ದಾಖಲಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ ಚಿಕಿತ್ಸೆ ನೀಡಲಾಗಿದೆ.