ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಂಟ್ವಾಳ ತಾಲೂಕಿನ ನಂದಾವರ ಕಾರ್ಯಕ್ಷೇತ್ರದ, ಸಜೀಪ ಮುನ್ನೂರು ಗ್ರಾಮದ ಮಾರ್ನಬೈಲು ನಿವಾಸಿ ಕುಮಾರಿ ಸಾನ್ವಿ ಅನಾರೋಗ್ಯ ದಿಂದ ಬಳಲುತ್ತಿದ್ದು, ಅವರಿಗೆ ಗ್ರಾಮಾಭಿವೃದ್ಧಿ ಯೋಜನೆಯ ಕ್ರಿಟಿಕಲ್ ಫಂಡ್ ರೂಪಾಯಿ 40,000/- ದ ಚೆಕ್ ನ್ನು ಗ್ರಾಮಾಭಿವೃದ್ದಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಸ್ತಾಂತರ ಮಾಡಿದರು.
ಈ ಸಂದರ್ಭ ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್, ಪ್ರಮುಖ ರಾದ ಪ್ರವೀಣ್ ರಾವ್, ವಲಯ ಮೇಲ್ವಿಚಾರಕಿ ಮಮತಾ, ಸೇವಾಪ್ರತಿನಿಧಿ ವನಿತಾ, ಭಾಗ್ಯಲಕ್ಷ್ಮಿ ಸ್ವ ಸಹಾಯ ಸಂಘಸದಸ್ಯರಾದ ಸುನಿಲ್ ಉಪಸ್ಥಿತರಿದ್ದರು.