ನೂತನವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ದಂಪತಿಗಳಿಗೆ ಆಯೋಜಿಸಿದ ಕಾರ್ಯಕ್ರಮ ನವದಂಪತಿ ಸಮಾವೇಶವು ತಳಿರು ತೋರಣಗಳಿಂದ ಅಲಂಕೃತಗೊಂಡ ಶ್ರೀರಾಮ ವಿದ್ಯಾಕೇಂದ್ರಕಲ್ಲಡ್ಕದ ವೇದವ್ಯಾಸಧ್ಯಾನ ಮಂದಿರದಲ್ಲಿ ನಡೆಯಿತು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕುಟುಂಬ ಪ್ರಭೋದನ್ ಸಹಸಂಯೋಜಕರಾದ ಶ್ರೀ ಸುಬ್ರಾಯ ನಂದೋಡಿ ಮತ್ತು ಶ್ರೀಮತಿ ಜಯಲಕ್ಷ್ಮೀ ನಂದೋಡಿ ಹಿರಿಯ ದಂಪತಿಗಳಾಗಿ ಉಪಸ್ಥಿತರಿದ್ದು, ಪ್ರಭು ಶ್ರೀರಾಮನ ಮೂರ್ತಿಗೆಕ್ಷೀರಾಭಿಷೇಕ ಮಾಡಿ ಪುಷ್ಪಾರ್ಚನೆಗೈಯ್ಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ತಮ್ಮಜೀವನದ ಅನುಭವನಗಳನ್ನು ಹಂಚಿಕೊಂಡರು.
ಡಾ| ಪ್ರಭಾಕರ್ ಭಟ್‌ಕಲ್ಲಡ್ಕ ಅವರು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪ್ರಾಸ್ತಾವಿಕ ಮಾತನಾಡಿದರು. ಧರ್ಮ ಸಂಸ್ಕ್ರತಿಯ ಕೇಂದ್ರ ಬಿಂದುವಾದ ನಮ್ಮ ಮನೆ, ನಮ್ಮ ಕುಟುಂಬವನ್ನು ನಾವು ರಕ್ಷಣೆ ಮಾಡಬೇಕು. ಹಿಂದೂ ಸಮಾಜ ಉಳಿದಿರುವುದು ಪರಸ್ಪರ ತಿಳುವಳಿಕೆಯಿಂದ ಎಂದು ಹಿಂದೂ ಸಮಾಜದ ಬಗ್ಗೆ ತಿಳಿಸಿದರು.
ಗಜಾನನ ಪೈ ಅವರು ಮಾತನಾಡಿ ನಾವು ಧರ್ಮದ ರೀತಿಯಲ್ಲಿ ನಡೆಯುವಂತಹ ಪ್ರಜೆಗಳು ನಮ್ಮದು ಸನಾತನ ಸಂಸ್ಕ್ರತಿ ಪೀಳಿಗೆಯಿಂದ ಪೀಳಿಗೆಗೆ ನಡೆದುಕೊಂಡು ಬಂದಿದೆ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗಬೇಕು ಅದಕ್ಕೆ ಬೇಕಾದಂತಹ ಸಂಸ್ಕಾರ ಕೊಡಬೇಕು ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಸು.ರಾಮಣ್ಣನವರು ದಂಪತಿಗಳಿಂದ ಓಂಕಾರ ಮತ್ತು ರಾಮತಾರಕ ಮಂತ್ರವನ್ನು ಹೇಳಿಸಿದರು. ಧರ್ಮವನ್ನು ನಾವು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ. ಸಂಸಾರ ಪಥದಲ್ಲಿ ಸಾಗುವಾಗ ದಂಪತಿಗಳಲ್ಲಿ ತಾಳ್ಮೆ, ಹೊಂದಾಣಿಕೆ, ಪರಸ್ಪರ ಅಥೈಯಿಸಿಕೊಳ್ಳುವುದು ತುಂಬಾ ಅಗತ್ಯವೆಂದು ಮಾರ್ಗದರ್ಶನ ಮಾಡಿದರು.
ಕರ‍್ಯಕ್ರಮದಲ್ಲಿ 52 ದಂಪತಿಗಳು ಭಾಗವಹಿಸಿದ್ದು, ಬಂದಿರುವ ಎಲ್ಲಾ ನವದಂಪತಿಗಳ ಪಾದ ತೊಳೆದು ಸ್ವಾಗತಿಸಿ, ಅಗ್ನಿ ಕುಂಡಕ್ಕೆ ಅರ್ಘ್ಯ ಅರ್ಪಿಸಿ ದಂಪತಿಗಳನ್ನು ಶಿಶುಮಂದಿರದ ಗುಹೆಯ ಮೂಲಕ ವೇದಘೋಷದೊಂದಿಗೆ ವೇದವ್ಯಾಸ ಸಭಾಂಗಣಕ್ಕೆಕರೆದೊಯ್ಯಲಾಯಿತು.
ಕರ‍್ಯಕ್ರಮದಲ್ಲಿ ಶ್ರೀರಾಮ ವಿದ್ಯಾಕೇಂದ್ರದಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಡಾ| ಕಮಲಾ ಭಟ್ ಹಾಗೂ ಶ್ರೀಮತಿ ಸುಮಿತಾ ಪೈ., ಸಹಸಂಚಾಲಕರಾದರಮೇಶ್‌ಎನ್., ಉಪಸ್ಥಿತರಿದ್ದರು.
ಶಿಶುಮಂದಿರ ಮಾತೃಭಾರತಿ ಸದಸ್ಯರು ಮತ್ತು ಪೋಷಕರು ಸ್ವಯಂ ಸೇವಕರಾಗಿ ಕರ‍್ಯ ನಿರ್ವಹಿಸಿದರು. ಶ್ರೀರಾಮ ಶಿಶುಮಂದಿರದ ಮಾತೃಭಾರತಿಯ ಸದಸ್ಯೆಯರಾದ ಶ್ರೀಮತಿ ಹರ್ಷಿತಾ ಸ್ವಾಗತಿಸಿ, ಶ್ರೀಮತಿ ಸ್ವಾತಿ ಪ್ರಾರ್ಥಿಸಿ, ಶ್ರೀಮತಿ ಸೌಮ್ಯ ವಂದಿಸಿ, ಶ್ರೀಮತಿ ಗುರುಪ್ರಿಯ ವ್ಯಯ್ಯಕ್ತಿಕಗೀತೆ ಹಾಡಿದರು. ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾದ ಶ್ರೀಮತಿ ಚೈತ್ರ ಕರ‍್ಯಕ್ರಮವನ್ನು ನಿರೂಪಿಸಿದರು.